ಗೋವಾದ ಶಿರ್‌ಗಾಂವ್‌ನಲ್ಲಿರುವ ಶ್ರೀ ಲೈರಾಯಿ ಜಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿದೆ. ಪರಿಣಾಮ ಈ ದುರಂತದಲ್ಲಿ 7 ಮಂದಿ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಶಿರ್‌ಗಾಂವ್‌ನಲ್ಲಿರುವ ಲೈರಾಯಿ ದೇವಿಯ ವಾರ್ಷಿಕ ಹಬ್ಬವಾಗಿದೆ. ಇದರಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ. ದೇವಿಯ ಆರಾಧನೆ ಬಳಿಕ ಕೆಂಡದಲ್ಲಿ ಹಾರುವ ಆಚರಣೆ ಮಾಡಲಾಗುತ್ತೆ. ಸದ್ಯದ ಮಾಹಿತಿ ಪ್ರಕಾರ, ಹಲವರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಇನ್ನು ಗೋವಾ ಸಿಎಂ ಪ್ರಮೋದ ಸಾವಂತ್ ಆಸ್ಪತ್ರೆಗೆ ಭೇಟಿ ನೀಡಿ, ಗಂಭೀರ ಗಾಯಗೊಂಡವರ ಮಾಹಿತಿ ಪಡೆದು, ಸೂಕ್ತ ಚಿಕಿತ್ಸೆಗೆ ಸೂಚಿಸಿದ್ದಾರೆ.