ಅಪರಾಧ ಸುದ್ದಿ

ಶಾಲಿನಿ ರಜನೀಶ್ ಮೇಲಿನ ಲಂಚದ ಆರೋಪ ಸುಳ್ಳು: ವಿಚಾರಣೆ ನಂತರ ಉಲ್ಟಾ ಹೊಡೆದ ಸ್ನೇಹಮಯಿ ಕೃಷ್ಣ

Share It

ಬೆಂಗಳೂರು: ಸಿ.ಎಸ್. ಶಾಲಿನಿ ರಜನೀಶ್ ವಿರುದ್ಧ ತಾವು ಮಾಡಿದ್ದ ಲಂಚದ ಆರೋಪ ಸುಳ್ಳು ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಉಲ್ಟಾ ಹೊಡೆದಿದ್ದಾರೆ.

ಸತತ 24 ಗಂಟೆಗಳ ವಿಚಾರಣೆ ನಂತರ ಅವರು ಶಾಲಿನಿ ರಜನೀಶ್ ಅವರ ಕ್ಷಮೆ ಕೋರಿದ್ದಾರೆ. ಸಿಸಿಬಿ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ಬಂಧಿಸಿ, ಸತತ 23 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದರು.

ಮೂಡಾ ಮಾಜಿ ಆಯುಕ್ತ ಡಿ.ಬಿ.ನಟೇಶ್ ಅವರು ತಾವು ಆ ಹುದ್ದೆಗೆ ಬರಲು ಸಿಎಸ್‌ಗೆ ಲಂಚ ನೀಡಿದ್ದಾರೆ ಎಂಬ ಆರೋಪವನ್ನು ಸ್ನೇಹಮಯಿ ಕೃಷ್ಣ ಮಾಡಿದ್ದರು, ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ನಟೇಶ್ ಪೊಲೀಸರಿಗೆ ದೂರು ನೀಡಿದ್ದರು.

ಸಿಸಿಬಿ ಪೊಲೀಸರು ಮೈಸೂರಿನ ಸ್ನೇಹಮಯಿ ಕೃಷ್ಣ ಅವರ ಎರಡು ನಿವಾಸ ಹಾಗೂ ಒಂದು ಕಚೇರಿಯ ಮೇಲೆ ದಾಳಿ ನಡೆಸಿ, ಅವರನ್ನು ವಶಕ್ಕೆ ಪಡೆದಿದ್ದರು. ಅನಂತರ ಅವರನ್ನು ಸತತ 23 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು, ಇದೀಗ ವಿಚಾರಣೆ ನಂತರ ಸ್ನೇಹಮಯಿ ಕೃಷ್ಣ ಉಲ್ಟಾ ಹೊಡೆದಿದ್ದಾರೆ.


Share It

You cannot copy content of this page