ರೈಲಿಗೆ ತಲೆ ಕೊಟ್ಟು ಅಣ್ಣ-ತಂಗಿ ಆತ್ಮಹತ್ಯೆ

Share It

ಶಿಡ್ಲಘಟ್ಟ: ಮಾನಸಿಕವಾಗಿ ನೊಂದಿದ್ದ ಅಣ್ಣ ತಂಗಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ನಡೆದಿದೆ.

ಪಟ್ಟಣದ ಪ್ರೇಮನಗರ ನಿವಾಸಿಗಳಾದ ಪ್ರಭು(25) ಹಾಗೂ ನವ್ಯಾ(23) ಆತ್ಮಹತ್ಯೆ ಮಾಡಿಕೊಂಡ ಅಣ್ಣ ತಂಗಿ ಎನ್ನಲಾಗಿದೆ. ಈ ಇಬ್ಬರು ಪಟ್ಟಣದ ಹೊರವಲಯದಲ್ಲಿರುವ ರೈಲ್ವೆ ಹಳಿಯ ಮೇಲೆ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಇಬ್ಬರು ಅಣ್ಣ ತಂಗಿ ಮಾನಸಿಕವಾಗಿ ಬಹಳ ನೊಂದಿದ್ದರು ಎನ್ನಲಾಗಿದೆ. ಅವರ ತಾಯಿ ಇತ್ತೀಚಿಗೆ ಅನಾರೋಗ್ಯದಿಂದ ನಿಧನರಾಗಿದ್ದರು. ತಾಯಿಯ ನಿಧನದಿಂದ ನೊಂದಿದ್ದ ಅಣ್ಣ ತಂಗಿ ಬಹಳ ನೊಂದಿದ್ದರು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಘಟನೆ ನಡೆದ ಸ್ಥಳಕ್ಕೆ ಚಿಕ್ಕಬಳ್ಳಾಪುರ ರೈಲ್ವೇ ಪೋಲೀಸರು ಆಗಮಿಸಿದ್ದು, ಶವವನ್ನು ಜಿಲ್ಲಾಸ್ಪತ್ರೆಗೆ ಶವಪರೀಕ್ಷೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


Share It

You May Have Missed

You cannot copy content of this page