ಬೆಂಗಳೂರು:ಬಿಟಿಎಂ ಬಡಾವಣೆಯಲ್ಲಿ ಶಾಸಕರ ವಿಶೇಷ ಕ್ಷೇತ್ರ ಅನುದಾನದಲ್ಲಿ ರಸ್ತೆ & ಚರಂಡಿಗಳ ಕಾಮಗಾರಿಗೆ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಚಿವ ರಾಮಲಿಂಗಾ ರೆಡ್ಡಿ ಅವರು ಪೂಜೆ ನೆರವೇರಿಸಿ ಕಾಮಗಾರಿಗಳಿಗೆ ಚಾಲನೆ ನೀಡಿದರು.
13 ನೇ ಎ ಕ್ರಾಸ್, ಅಂಬೇಡ್ಕರ್ ಸಮುದಾಯಭವನ, NS ಪಾಳ್ಯ, 4ನೇ ಮುಖ್ಯರಸ್ತೆ, ಕಿರುವನ SFHS ಲೇಔಟ್ ಎದುರು, ದಾವಣಗೆರೆ ಬೆಣ್ಣೆ ದೋಸೆ ಹತ್ತಿರ, ಕೆಂಪೇಗೌಡ ಆಟದ ಮೈದಾನ, 9ನೇ ಮುಖ್ಯರಸ್ತೆ, 13 ನೇ ಮುಖ್ಯರಸ್ತೆ, 7ನೇ ಕ್ರಾಸ್, ಸನ್ ಶೈನ್ ಕಾಲೋನಿಯಲ್ಲಿ ಕಾಮಗಾರಿಗಳು ನಡೆಯಲಿವೆ.

ಈ ಸಂದರ್ಭದಲ್ಲಿ ಜಿ.ಎನ್.ಆರ್ ಬಾಬು, ಮಾಜಿ ಬಿಬಿಎಂಪಿ ಸದಸ್ಯರು ಹಾಗೂ ಸ್ಥಳೀಯ ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.

