ಸಲ್ಮಾನ್ ಮನೆ ಹೊರಗೆ ಫೈರಿಂಗ್ ಕೇಸ್: ನದಿಯಲ್ಲಿ ಪಿಸ್ತೂಲ್, ಗುಂಡುಗಳು ಪತ್ತೆ

Oplus_131072

Oplus_131072

Share It

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡುವ ಶೋಧ ಕಾರ್ಯಾಚರಣೆಯಲ್ಲಿ ಮುಂಬೈ ಪೊಲೀಸರ ಅಪರಾಧ ವಿಭಾಗವು ಗುಜರಾತ್‌ನ ತಾಪಿ ನದಿಯಿಂದ 2 ಪಿಸ್ತೂಲ್‌ಗಳು, ಮ್ಯಾಗಜೀನ್‌ಗಳು ಮತ್ತು ಬುಲೆಟ್‌ಗಳನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಮವಾರ ಆರಂಭವಾದ ಶೋಧ ಕಾರ್ಯದಲ್ಲಿ ಅಪರಾಧ ವಿಭಾಗದ ಅಧಿಕಾರಿಗಳು 2 ಪಿಸ್ತೂಲ್‌ಗಳು, 3 ಮ್ಯಾಗಜೀನ್‌ಗಳು ಮತ್ತು 13 ಬುಲೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ದಯಾ ನಾಯಕ್ ಸೇರಿದಂತೆ 12 ಅಧಿಕಾರಿಗಳ ತಂಡ ಇನ್ನೂ ಸ್ಥಳದಲ್ಲಿಯೇ ಇದೆ. ಸ್ಕೂಬಾ ಡೈವರ್‌ಗಳ ಸಹಾಯದಿಂದ ಶೋಧ ಕಾರ್ಯ ನಡೆಯುತ್ತಿದೆ ಎಂದರು. ಇಬ್ಬರು ಬಂಧಿತ ಆರೋಪಿಗಳಾದ ವಿಕ್ಕಿ ಗುಪ್ತಾ (24) ಮತ್ತು ಸಾಗರ್ ಪಾಲ್ (21) ಎಪ್ರಿಲ್ 14 ರಂದು ಮುಂಬೈನ ಬಾಂದ್ರಾ ಪ್ರದೇಶದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಖಾನ್ ಅವರ ಮನೆಯ ಹೊರಗೆ ಗುಂಡು ಹಾರಿಸಿ ನಂತರ ಮೋಟಾರ್‌ಬೈಕ್‌ನಲ್ಲಿ ಸ್ಥಳದಿಂದ ಪರಾರಿಯಾಗಿದ್ದರು.

ನಂತರ ತಾಂತ್ರಿಕ ಕಣ್ಗಾವಲು ಆಧರಿಸಿ, ಅವರನ್ನು ಏಪ್ರಿಲ್ 16 ರಂದು ಮುಂಬೈ ಮತ್ತು ಕಚ್ ಪೊಲೀಸರ ಜಂಟಿ ತಂಡಗಳು ಗುಜರಾತ್‌ನ ಭುಜ್ ಪಟ್ಟಣದ ಬಳಿಯ ಮಾತಾ ನೊ ಮಧ್‌ನಲ್ಲಿರುವ ದೇವಾಲಯದ ಆವರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ನಂತರ ಹೆಚ್ಚಿನ ತನಿಖೆಗಾಗಿ ಬಂಧಿತರನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಯಿತು.

ಮೂಲಗಳ ಪ್ರಕಾರ, ಗುಂಡಿನ ದಾಳಿಯ ನಂತರ ಮುಂಬೈನಿಂದ ರಸ್ತೆಯ ಮೂಲಕ ಸೂರತ್ ತಲುಪಿದ ನಂತರ ರೈಲಿನಲ್ಲಿ ಭುಜ್‌ಗೆ ಪಲಾಯನ ಮಾಡುತ್ತಿದ್ದಾಗ ರೈಲ್ವೆ ಸೇತುವೆಯಿಂದ ತಾಪಿ ನದಿಗೆ ಆಯುಧವನ್ನು ಎಸೆದಿದ್ದೇವೆ ಎಂದು ಇಬ್ಬರೂ ವಿಚಾರಣೆಯ ಸಮಯದಲ್ಲಿ ಪೊಲೀಸರಿಗೆ ಹೇಳಿದ್ದರು. ಗುಪ್ತಾ ಮತ್ತು ಪಾಲ್ ಇಬ್ಬರು ಬಿಷ್ಣೋಯ್ ಸಹೋದರರಿಂದ ಸೂಚನೆಗಳನ್ನು ಸ್ವೀಕರಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ.


Share It

You cannot copy content of this page