ಕ್ರೀಡೆ ಸುದ್ದಿ

ಐಸಿಸಿ ಜೂನ್ ತಿಂಗಳ ಶ್ರೇಷ್ಠ ಆಟಗಾರರ ರೇಸ್ ನಲ್ಲಿ ಬುಮ್ರಾ ಹಾಗೂ ರೋಹಿತ್

Share It

ಟಿ 20 ವಿಶ್ವ ಕಪ್ ಮುಗಿದ ಬಳಿಕ ಐಸಿಸಿ ಜೂನ್ ತಿಂಗಳ ಶ್ರೇಷ್ಠ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಐಸಿಸಿ 2024ರ ಟಿ 20 ವಿಶ್ವ ಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮೂರು ಜನರನ್ನು ಪ್ಲೇಯರ್ ಆಫ್ ದಿ ಮಂತ್ ಪ್ರಶಸ್ತಿಗೆ ನಾಮನಿರ್ದೇಶನ ಗೊಳಿಸಿದೆ.

ಮೊದಲಿಗೆ ಟೀಮ್ ಇಂಡಿಯಾವನ್ನು ಚಾಂಪಿಯನ್ ಆಗಿ ಮಾಡಲು ಪ್ರಮುಖ ಪಾತ್ರವಹಿಸಿದ ಜಸ್ ಪ್ರೀತ್ ಬುಮ್ರಾರನ್ನು ಆಯ್ಕೆ ಮಾಡಿದೆ. ಟಿ 20 ವಿಶ್ವಕಪ್ ನಲ್ಲಿ ಆಡಿದ 8 ಪಂದ್ಯಗಳಲ್ಲಿ ಬರೋಬ್ಬರಿ 29.4 ಓವರ್ ಬೌಲಿಂಗ್ ಮಾಡಿದ ಬುಮ್ರಾ 15 ವಿಕೆಟ್ ಕಬಳಿಸಿ, ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗೆ ಭಾಜೀನರಾಗಿದ್ದರು. ಹಾಗಾಗಿ ಇವರು ಈ ರೇಸ್ ನಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ.

ಇನ್ನೂ ಎರಡನೆಯದಾಗಿ ಟೀಮ್ ಇಂಡಿಯಾಗೆ ವಿಶ್ವಕಪ್ ತಂದುಕೊಟ್ಟ ನಾಯಕ ರೋಹಿತ್ ಶರ್ಮ. ಇವರು 8 ಪಂದ್ಯಗಳಲ್ಲಿ ಆರಂಭಿಕ ಆಟಗಾರಣಾಗಿ ಕಣಕ್ಕಿಳಿದು 3 ಅರ್ಧ ಶತಕಗಳೊಂದಿಗೆ 257 ರನ್ ಗಳನ್ನು ತನ್ನ ಬ್ಯಾಟ್ ಯಿಂದ ಸಿಡಿಸಿ ಮಿಂಚಿದ್ದರು. ಹಾಗಾಗಿ ಇವರೂ ಸಹ ಐಸಿಸಿ ಜೂನ್ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಕೊನೆಯದಾಗಿ ಟಿ 20 ವಿಶ್ವ ಕಪ್ ನ ಟಾಪ್ ಸ್ಕೋರರ್ ಅಫ್ಘಾನಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಾಮನುಲ್ಲಾ ಗುರ್ಬಾರ್ಝ್, ಅಫ್ಘಾನಿಸ್ತಾನ್ ಪರ ಆರಂಭಿಕ ಆಟಗಾರನಾಗಿ ಬ್ಯಾಟ್ ಬೀಸಿ 8 ಪಂದ್ಯಗಳಲ್ಲಿ 3 ಅರ್ಧ ಶತಕಗಳೊಂದಿಗೆ 281 ರನ್ ಭಾರಿಸಿದ್ದಾರೆ.
ಆದ್ದರಿಂದ ಇವರೂ ಸಹಾ ಈ ರೇಸ್ ನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಈ ಮೂರು ಜನ ಆಟಗಾರರಲ್ಲಿ ನಿಮ್ಮ ನೆಚ್ಚಿನ ಆಟಗಾರ ಪ್ಲೇಯರ್ ಆಫ್ ದಿ ಮಂತ್ ಆಗಬೇಕಾದರೆ. ನೀವು ಐಸಿಸಿಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ವೋಟ್ ಮಾಡುವುದರಿಂದ ನಿಮ್ಮ ನೆಚ್ಚಿನ ಆಟಗಾರನನ್ನು ಪ್ಲೇಯರ್ ಆಫ್ ದಿ ಮಂತ್ ಮಾಡಬಹುದು.


Share It

You cannot copy content of this page