ಆಸ್ಪತ್ರೆ ಆಪರೇಷನ್ ಥಿಯೇಟರ್‌ನಲ್ಲಿ ಕ್ಯಾಮೆರಾ: ಮಹಿಳಾ ಸಿಬ್ಬಂದಿ ವಿಡಿಯೋ ಚಿತ್ರೀಕರಣ ಯತ್ನ

Share It

ಬೆಂಗಳೂರು: ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನ ಡ್ರೆಸಿಂಗ್ ರೂಮ್‌ನಲ್ಲಿ ಮೊಬೈಲ್ ಕ್ಯಾಮೆರಾ ಇಟ್ಟು ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವುದನ್ನು ರಹಸ್ಯವಾಗಿ ಸೆರೆಯಿಡಿಯಲು ಯತ್ನಿಸಿದ ಜೂನಿಯರ್ ಟೆಕ್ನಿಷಿಯನ್‌ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ನಾಗರಬಾವಿ ಎರಡನೇ ಹಂತದ ಖಾಸಗಿ ಆಸ್ಪತ್ರೆಯೊಂದರ ನಿರ್ದೇಶಕ ಡಾ.ಚೇತನ್ ಎಂಬುವರು ನೀಡಿದ ದೂರಿನ ಮೇರೆಗೆ ಸುವೆಂದು ಮೊಹತಾ (೨೩) ಎಂಬುವನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪಶ್ಚಿಮಬಂಗಾಳ ಮೂಲದ ಸುವೆಂದು ಕಳೆದ ಒಂದು ವರ್ಷದಿಂದ ಆಸ್ಪತ್ರೆ ಆಪರೇಷನ್ ಥಿಯೇಟರ್‌ನಲ್ಲಿ ಜೂನಿಯರ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಡಿ.೨೦ರಂದು ಬೆಳಗ್ಗೆ ೮.೩೦ರ ಸುಮಾರಿಗೆ ಶಸ್ತ್ರ ಚಿಕಿತ್ಸಾ ಘಟಕದ ಕೊಠಡಿಯಲ್ಲಿ ಮಹಿಳಾ ಸಿಬ್ಬಂದಿ ಬಟ್ಟೆ ಬದಲಾಯಿಸುವಾಗ ಆರೋಪಿ ಇಟ್ಟಿದ್ದ ಮೊಬೈಲ್ ಗಮನಿಸಿದ್ದಾರೆ. ಆತಂಕಗೊAಡ ಸಿಬ್ಬಂದಿ ಮೊಬೈಲ್ ಪರಿಶೀಲಿಸಿದಾಗ ಗುಪ್ತವಾಗಿ ವಿಡಿಯೋ ಮಾಡುತ್ತಿರುವುದು ಗೊತ್ತಾಗಿದೆ. ಈ ಸಂಬAಧ ದೂರು ನೀಡಿದ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Share It

You May Have Missed

You cannot copy content of this page