ಅಭ್ಯರ್ಥಿಗಳು ಖರ್ಚು-ವೆಚ್ಚದ ಬಗ್ಗೆ ವೀಕ್ಷಕರಿಂದ ಸಹಿ ಪಡೆಯುವುದು ಕಡ್ಡಾಯ
ಬೆಂಗಳೂರು : ಚುನಾವಣಾ ಅಭ್ಯರ್ಥಿಗಳು ತಮ್ಮ ಖರ್ಚು-ವೆಚ್ಚವನ್ನು ಚುನಾವಣಾ ವೆಚ್ಚ ವೀಕ್ಷಕರು ಹಾಗೂ ಸಹಾಯಕ ವೆಚ್ಚ ವೀಕ್ಷಕರಿಂದ ಸಹಿ ಪಡೆದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ.
ಪ್ರಜಾಪ್ರತಿ ನಿಧಿ ಕಾಯ್ದೆ-1951ರ ಕಲಂ-77ರ ಪ್ರಕಾರ 2024ರ ಲೋಕಸಭಾ ಚುನಾವಣಾ ಅಭ್ಯರ್ಥಿಗಳು ಅಥವಾ ಅಭ್ಯರ್ಥಿಗಳು ನಿಗದಿಪಡಿಸಿರುವ ಪ್ರತಿನಿಧಿಗಳು, ಚುನಾವಣಾ ವೆಚ್ಚವನ್ನು ಪ್ರತ್ಯೇಕವಾಗಿ ರಿಜಿಸ್ಟರ್ ಗಳಲ್ಲಿ (ಎ ಬಿಸಿ) ಗಳಲ್ಲಿ ನಿರ್ವಹಿಸಿ, ಚುನಾವಣಾ ವೆಚ್ಚ ವೀಕ್ಷಕರಿಗೆ ಮತ್ತು ಸಹಾಯಕ ವೆಚ್ಚ ವೀಕ್ಷಕರಿಂದ ಕನಿಷ್ಠ 3 ಬಾರಿ ಪರಿಶೀಲನೆಗೆ ಒಳಪಡಿಸಿ ಸಹಿ ಪಡೆಯುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ.
ಆದ್ದರಿಂದ, ತಮಗೆ ಈ ಮೂಲಕ ತಿಳಿಯ ಪಡಿಸುವುದೇನೆಂದರೆ, ಚುನಾವಣಾ ವೆಚ್ಚದ ರಿಜಿಸ್ಟರ್‍ಗಳನ್ನು ಪರಿಶೀಲಿಸಲು ಈ ಕೆಳಕಂಡ ದಿನಾಂಕ, ಸಮಯ ಮತ್ತು ವಿಳಾಸದಲ್ಲಿ ತಪ್ಪದೇ ಹಾಜರಾಗತಕ್ಕದ್ದು ಹಾಗೂ ವೆಚ್ಚಕ್ಕೆ ಸಂಬಂಧಿಸಿದಂತೆ ವೋಚರ್ ಅಥವಾ ಬಿಲ್ ಗಳೊಂದಿಗೆ ಚುನಾವಣಾ ಮೀಸಲು ಖಾತೆಯ ಬ್ಯಾಂಕ್ ಪಾಸ್ ಪುಸ್ತಕವನ್ನು ನಿಗದಿಪಡಿಸಿದ ಹಿಂದಿನ ದಿನಾಂಕಕ್ಕೆ ಕೇಂದ್ರೀಕರಿಸಿಕೊಂಡು ಪರಿಶೀಲನಾ ಸಮಯದಲ್ಲಿ ಹಾಜರುಪಡಿಸಬೇಕಿದೆ.