ಅಪರಾಧ ರಾಜಕೀಯ ಸಿನಿಮಾ ಸುದ್ದಿ

ಕಂಗನಾಗೆ ಕಪಾಳಮೋಕ್ಷ ಮಾಡಿದ ಅಧಿಕಾರಿ ವಿರುದ್ಧ ಪ್ರಕರಣ

Share It

ಚಂಡೀಘಡ : ಬಾಲಿವುಡ್ ನಟಿ ಮತ್ತು ನೂತನ ಸಂಸದೆ ಕಂಗನಾ ರಣಾವತ್‌ಗೆ ವಿಮಾನ ನಿಲ್ದಾಣದಲ್ಲಿ ಕಪಾಳಮೋಕ್ಷ ಮಾಡಿದ ಸಿಐಎಎಫ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಕಂಗನಾ ಮೇಲೆ ಕೈ ಮಾಡಿದ ಗರ‍್ವಿಂದರ್ ಕೌರ್ ಎಂಬ ಐಎಸ್ ಮಹಿಳಾ ಕಾನ್ಸ್ಟೇಬಲ್ ವಿರುದ್ಧ ಸೆಕ್ಷನ್ ೩೨೩ ಮತ್ತು ೩೪೧ ರಡಿ ಪ್ರಕರಣ ದಾಖಲು ಮಾಡಲಾಗಿದೆ. ಅವರನ್ನು ವಿಚಾರಣೆಗೆ ಒಳಪಡಿಸಿ, ಅವರ ವಿರುದ್ಧ ಕ್ರಮಕ್ಕೆ ಐಎಸ್‌ಎಎಫ್ ಮುಂದಾಗಿದೆ.

ಚಂಡೀಘಡ ವಿಮಾನ ನಿಲ್ದಾಣದಲ್ಲಿ ಗುರುವಾರ ದೆಹಲಿಗೆ ತೆರಳಲು ಬರುತ್ತಿದ್ದ ಕಂಗನಾ ರಣಾವತ್ ಭದ್ರತಾ ತಪಾಸಣೆ ಮಾಡಿಸುವ ವೇಳೆ, ಅಲ್ಲಿಯೇ ಇದ್ದ ಮಹಿಳಾ ಸಿಬ್ಬಂದಿ ಇದ್ದಕ್ಕಿದ್ದಂತೆ ಕಪಾಳ ಮೋಕ್ಷ ಮಾಡಿದ್ದರು. ಒಂದು ಕ್ಷಣ ಇಡೀ ವಿಮಾನ ನಿಲ್ದಾಣ ಗೊಂದಲಕ್ಕೆ ಸಿಲುಕಿತ್ತು.

ಘಟನೆ ನಡೆಯುತ್ತಿದ್ದಂತೆ ಗೊಂದಲಕ್ಕೀಡಾದ ಕಂಗನಾ, ಮಹಿಳಾ ಸಿಬ್ಬಂದಿಯ ವಿರುದ್ಧ ದೂರು ನೀಡಿದ್ದಾರೆ. ಜತೆಗೆ, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ. ಈ ವೇಳೆ ಕೂಡ ಪಂಜಾಬ್‌ನಲ್ಲಿ ಉಗ್ರವಾದ ಹೆಚ್ಚಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

ಕಂಗನಾ ರಣಾವತ್, ಈ ಹಿಂದೆ ರೈತರ ಹೋರಾಟವನ್ನು ವಿರೋಧಿಸಿ, ಬಿಜೆಪಿ ಪರವಾಗಿ ಮಾತನ್ನಾಡಿದ್ದರು. ಆ ವೇಳೆ ಅವರು ರೈತ ಹೋರಾಟಗಾರರನ್ನು ಉಗ್ರರೆಂದು ಕರೆದಿದ್ದರು. ಇದೇ ಕಾರಣಕ್ಕೆ ಕೌರ್ ಕಂಗನಾಗೆ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.

ಐಎಸ್‌ಎಎಫ್ ಸಿಬ್ಬಂದಿಯಾಗಿರುವ ಗರ‍್ವಿಂದರ್ ಕೌರ್, ಸಹೋದರ ರೈತ ಹೋರಾಟಗಾರರ ಮುಂಚೂಣಿ ನಾಯಕರಾಗಿದ್ದರು ಎನ್ನಲಾಗಿದೆ. ಅವರು, ರೈತ ಮೋರ್ಚಾದ ನಾಯಕನಾಗಿದ್ದು, ಕೌರ್ ಕಂಗನಾ ಹೇಳಿಕೆಗೆ ಸೇಡು ತೀರಿಸಿಕೊಳ್ಳಲು ಅವರ ವಿರುದ್ಧ ಕಪಾಳಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.


Share It

You cannot copy content of this page