ಅಪರಾಧ ಸುದ್ದಿ

ಸಿಸಿಬಿಯಿಂದ ಸ್ನೇಹಮಯಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅರೆಸ್ಟ್‌

Share It

ಸಿಸಿಬಿಯಿಂದ ಸ್ನೇಹಮಯಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅರೆಸ್ಟ್‌
ಬೆಂಗಳೂರು: ಮೂಡಾ ಪ್ರಕರಣದಲ್ಲಿ ಕಾನೂನು ಹೋರಾಟ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಾಜಿ ಮೂಡಾ ಆಯುಕ್ತ ಡಿ.ಬಿ ನಟೇಶ್ ಕುಮಾರ್ ನೀಡಿದ್ದ ದೂರಿನನ್ವಯ ಸಿಸಿಬಿ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ಅರೆಸ್ಟ್‌ ಮಾಡಿದ್ದು, ಮೈಸೂರಿನ ಅವರ ಮನೆಯಲ್ಲಿ ಸಿಸಿಬಿ ಶೋಧ ಕಾರ್ಯ ನಡೆಸಿದ್ದಾರೆ.

ಮೂಡಾ ಆಯುಕ್ತರ ಹುದ್ದೆಗೆ ನೇಮಕವಾಗುವ ಸಂದರ್ಭದಲ್ಲಿ ನಟೇಶ್ ಕುಮಾರ್ ಅವರು ಶಾಲಿನಿ ರಜನೀಶ್ ಗೆ ಲಂಚ ನೀಡಿದ್ದಾರೆ ಎಂದು ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಅವರನ್ನು ಬಂಧಿಸಿದ್ದಾರೆ.


Share It

You cannot copy content of this page