ನರೇಗಾದ ಹೆಸರು ಬದಲಾಯಿಸಲು ಕೇಂದ್ರ ಸರಕಾರದಿಂದ ಮಸೂದೆ: ಕೆಲಸದ ದಿನಗಳಲ್ಲಿಯೂ ಹೆಚ್ಚಳ

Share It

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಹೆಸರನ್ನು ಬದಲಿಸಲು ಮುಂದಾಗಿರುವ ಸರಕಾರ, ಉದ್ಯೋಗದ ದಿನಗಳನ್ನೂ ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ.

ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತ ಹೊಸ ಮಸೂದೆ ಜಾರಿಗೆ ತರಲು ತೀರ್ಮಾನಿಸಿದ್ದು, ನರೇಗಾ ಹೆಸರಿನ ಬದಲಿಗೆ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಅಥವಾ ‘ವಿಬಿ ಜಿ ರಾಮ್ ಜಿ’ ಎಂದು ಮರುನಾಮಕರಣ ಮಾಡುವ ಸಾಧ್ಯತೆಯಿದೆ.

೨೦೦೫ರಲ್ಲಿ ಆಗಿನ ಯುಪಿಎ ಸರ್ಕಾರವು ನರೇಗಾ ಯೋಜನೆಯನ್ನು ಪ್ರಾರಂಭಿಸಿತು. ಮನರೇಗಾ ಎಂದು ಕರೆಯಲಾಗುವ ಈ ಯೋಜನೆಯು ಗ್ರಾಮೀಣ ಪ್ರದೇಶಗಳ ಜನರಿಗೆ ೧೦೦ ದಿನಗಳ ಕೆಲಸವನ್ನು ಖಾತರಿಪಡಿಸಿತ್ತು. ಈ ಮೂಲಕ ಅವರಿಗೆ ಆರ್ಥಿಕ ಭದ್ರತೆ ನೀಡುವುದಾಗಿತ್ತು. ಹೊಸ ಮಸೂದೆ ಯೋಜನೆಯ ಹೆಸರನ್ನು ಬದಲಿಸುವುದರ ಜೊತೆಗೆ ವರ್ಷದಲ್ಲಿ ೧೦೦ರ ಬದಲಿಗೆ ೧೨೫ ಕೂಲಿ ದಿನಗಳನ್ನು ಸೃಜಿಸಲಿದೆ.

ಕೇಂದ್ರ ಸರ್ಕಾರದ ಪ್ರಕಾರ, ಹೊಸ ಮಸೂದೆಯು ವಿಕಸಿತ ಭಾರತ – ೨೦೪೭ ರ ರಾಷ್ಟ್ರೀಯ ದೃಷ್ಟಿಕೋನ ಹೊಂದಿದೆ. ಲೋಕಸಭೆಯಲ್ಲಿ ಮಂಡಿಸಬೇಕಾದ ಮಸೂದೆಗಳನ್ನು ಪಟ್ಟಿ ಮಾಡುವ ಪೂರಕ ವ್ಯವಹಾರಗಳ ಪಟ್ಟಿಯಲ್ಲಿ ಈ ಮಸೂದೆ ಸೇರಿಸಲಾಗಿದೆ.

ಹೊಸ ಮಸೂದೆಯಲ್ಲೇನಿದೆ?: ಹೊಸ ಮಸೂದೆಯ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು, ಗ್ರಾಮೀಣ ಕುಟುಂಬಗಳಿಗೆ ೨೦ ವರ್ಷಗಳ ಕಾಲ ವೇತನ ಸಹಿತ ಉದ್ಯೋಗ ಖಾತರಿಪಡಿಸಿತ್ತು. ಸಾಮಾಜಿಕ ಭದ್ರತೆ ಮತ್ತಷ್ಟು ವಿಸ್ತರಿಸಿ, ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ತರಲು ಕಾಯ್ದೆಯನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ” ಎಂದು ಹೇಳಿದರು.


Share It

You May Have Missed

You cannot copy content of this page