ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಪತ್ನಿ ಗುರುಶರಣ್ ಕೌರ್ ಅವರಿಗೆ ನೀಡಿದ್ದ ಝೆಡ್ ಪ್ಲಸ್ ಸೆಕ್ಯೂರಿಟಿಯನ್ನು ಕೇಂದ್ರ ಸರಕಾರ ಹಿಂಪಡೆದಿದೆ.
ಡಿ.26, 2024 ರಲ್ಲಿ ಮನಮೋಹನ್ ಸಿಂಗ್ ಮೃತಪಟ್ಟಿದ್ದರು. ಅನಂತರ ಅವರಿಗೆ ಬೆದರಿಕೆ ಮಟ್ಟ ಕಡಿಮೆಯಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಸರಕಾರಕ್ಕೆ ವರದಿ ನೀಡಿದ್ದವು. ಈ ಹಿನ್ನೆಲೆಯಲ್ಲಿ ಅವರಿಗೆ ನೀಡಿದ್ದ ಝೆಡ್ ಪ್ಲಸ್ ಭದ್ರತೆ ಕಡಿತಗೊಳಿಸಿ, ಝೆಡ್ ಭದ್ರತೆಗೆ ಇಳಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಾಜಿ ಪ್ರಧಾನಿ ಹಾಗೂ ಕುಟುಂಬಸ್ಥರಿಗೆ ನೀಡುವ ಭದ್ರತೆ ಕಡಿತಗೊಳಿಸುವ ಸಂಬಂಧ ಕೇಂದ್ರ ಸರಕಾರ ಈಗಾಗಲೇ ಅನೇಕ ಸುಧಾರಣೆಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಮನಮೋಹನ್ ಸಿಂಗ್ ಅವರಿಗೆ ನೀಡಿದ್ದ ಭದ್ರತೆ ವಾಪಸ್ ಪಡೆದಿದೆ. ಆದರೆ, ಇದು ರಾಜಕೀಯ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗುವ ಸಾಧ್ಯತೆಯೂ ಇದೆ.
ಮನಮೋಹನ್ ಸಿಂಗ್ ವರಿಗೆ 2019 ರಲ್ಲಿ ಫ್ರೋಟೋ ಕಾಲ್ ಜತೆಗೆ ಝೆಡ್ ಪ್ಲಸ್ ಭದ್ರತೆ ನೀಡಲಾಗಿತ್ತು. ಇದೀಗ ಅವರ ಮರಣಾನಂತರ ಭದ್ರತೆಯನ್ನು ಝೆಡ್ ಶ್ರೇಣಿಗೆ ಇಳಿಸಲಾಗಿದೆ.