ರಾಜಕೀಯ ಸುದ್ದಿ

ಜಲಜೀವನ್‌ಗೆ ಕೇಂದ್ರದ ಅನುದಾನ ಬಿಡುಗಡೆಯಾಗಿಲ್ಲ: ಶಾಸಕ ಶರತ್ ಬಚ್ಚೇಗೌಡ

Share It

ಹೊಸಕೋಟೆ : ತಾಲೂಕಿನಾದ್ಯಂತ ಜೆಜೆಎಂ ಯೋಜನೆ ಯನ್ನು 239 ಕೋಟಿ ರೂ. ವೆಚ್ಚದಲ್ಲಿ ಒಟ್ಟು 254 ಗ್ರಾಮಗಳಲ್ಲಿ ಕೈಗೊಳ್ಳಲಾಗಿದೆ. ಇದುವರಿಗೆ 136 ಕೋಟಿ ರೂ. ಅನುದಾನ ಪ್ರಗತಿ ಆಧಾರದಲ್ಲಿ ಬಿಡುಗಡೆಯಾಗಿದ್ದು, ಇನ್ನೂ 23.56 ಕೋಟಿ ಟೂ. ಅನುದಾನ ಬಿಡುಗಡೆ’ ಆಗಬೇಕಿದೆ. ಒಂದೂವರೆ ವರ್ಷದಿಂದ ಕೇಂದ್ರ 18.17 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಲ್ಲ ಎಂದು ಶಾಸಕ ಶರತ್ ಬಚ್ಚೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ತಾಪಂ ಸಭಾಂಗಣದಲ್ಲಿ ಜೆಜೆಎಂ ಕಾಮಗಾರಿ ಸಂಬಂಧ ಜೆಜೆಎಂ ಗುತ್ತಿಗೆದಾರರು. ಗ್ರಾಪಂ ಅಧ್ಯಕ್ಷರು. ಪಿಡಿಒಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ಈ ಯೋಜನೆ ಶೇ.75ರಷ್ಟು ಮುಗಿಯುವ ಹಂತದಲ್ಲಿದ್ದು, ಇನ್ನುಳಿದ ಶೇ.40ರಷ್ಟು ಕಾಮಗಾರಿಗಳು ಪ್ರಗತಿಯಲ್ಲಿವೆ. ಕೇಂದ್ರ ಸರಕಾರ ಉಳಿಕೆ ಅನುದಾನ ನೀಡಿದಲ್ಲಿ ಮಾರ್ಚ್ ಹಂತಕ್ಕೆ ಕೆಲ ಗ್ರಾಮಗಳ ಹೊರತುಪಡಿಸಿ ಉಳಿದ ಭಾಗದಲ್ಲಿ ಕಾಮಗಾರಿ ಪೂರ್ಣಗೊಳಿಸುವ ಭರವಸೆಯಿದೆ.ಯೋಜನೆಗೆ ಬಾಕಿಯಿರುವ ರಾಜ್ಯದ ಪಾಲು 5.69 ಕೋಟಿ ರೂ. ಬಿಡುಗಡೆಗೆ ಸಂಬಂಧಪಟ್ಟವರೊಂದಿಗೆ ಮಾತನಾಡುತ್ತೇನೆ. ಮಾರ್ಚ್ 31ರ ವೇಳೆಗೆ ತಾಲೂಕಿನಲ್ಲಿ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಿದೆ.

ಬಾಕಿ ಕಾಮಗಾರಿಗಳನ್ನು ಮಾ. 31ರ ಒಳಗೆ ಮುಗಿಸಲು ಸೂಚನೆ: ಕಾಮಗಾರಿಗಳನ್ನು ಮಾಡುತ್ತಿದ್ದು, 6ಗುತ್ತಿಗೆದಾರರು ಕಾಮಗಾರಿಯನ್ನು ಸರಿಯಾಗಿ ಮಾಡದೆ ನಿಲ್ಲಿಸಿದ್ದಾರೆ. ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಮೂಲಕ ಕ್ರಮ ಕೈಗೊಳ್ಳಲಾಗುವುದು. ಪ್ರಕಾರ ಕಾಮಗಾರಿ ಪೂರ್ಣಗೊಂಡಿದ್ದಲ್ಲಿ ಹಸ್ತಾಂತರಿಸಬಹುದು ಎಂದರು. ಸಭೆಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಇಇ ಶ್ರೀಕಾಂತ್, ಎಇಇ ಬಾಲಚಂದರ್, ಇಒ ಮುನಿಯಪ್ಪ, ಬೆಸ್ಕಾಂ ಎಇಇ ಪುಟ್ಟಸ್ವಾಮಿ, ಗ್ರಾಪಂ ಅಧ್ಯಕ್ಷರು, ಪಿಡಿಒಗಳು ಹಾಜರಿದ್ದರು


Share It

You cannot copy content of this page