ಚಾಮರಾಜನಗರ: ಹುಲಿ ಜಾಡು ಹಿಡಿದ ಅರಣ್ಯ ಇಲಾಖೆ ನಡೆಸಿದ ಆಪರೇಷನ್ 5 ಹುಲಿ ಕಾರ್ಯಾಚರಣೆಯಲ್ಲಿ ಚಾಮರಾಜನಗರ ತಾಲೂಕಿನ ನಂಜೇದೇವನಪುರ ಸಮೀಪ ಗಂಡು ಹುಲಿಯೊಂದನ್ನು ಮಂಗಳವಾರ ರಾತ್ರಿ 10 ರ ಸುಮಾರಿಗೆ ಸೆರೆ ಹಿಡಿಯಲಾಗಿದೆ.
ಆನೆ ಮಡುವಿನ ಕೆರೆ ಬಳಿ 5 ಹುಲಿಗಳಿವೆ ಎಂದು ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಗಂಡು ಹುಲಿ ಕಾಣಿಸಿಕೊಂಡ ಕೂಡಲೇ ಸಾಕಾನೆಗಳ ಸಹಾಯದಿಂದ ಅರಿವಳಿಕೆ ಕೊಟ್ಟು ಸೆರೆ ಹಿಡಿಯಲಾಗಿದೆ. ಕೂಂಬಿAಗ್ ಎಕ್ಸ್ಪರ್ಟ್ ಸುಗ್ರೀವ ಕರಾರುವಕ್ಕಾಗಿ ಹುಲಿ ವಾಸನೆ ಪತ್ತೆ ಹಚ್ಚಿ ತನ್ನ ಮಾವುತ ಶಂಕರ್‌ಗೆ ಸೂಚನೆ ನೀಡಿತ್ತು.
ತಕ್ಷಣ ಸುಗ್ರೀವ ಆನೆ ಸಹಾಯದಿಂದ ಆನೆಮಡುವಿನ ಕೆರೆ ಪಕ್ಕ ನೀರು ಕುಡಿಯಲು ಬಂದ ಹುಲಿಗೆ ಪಶು ವೈದ್ಯರು ಅರಿವಳಿಕೆ ಕೊಟ್ಟರು. ಬಳಿಕ ಸೆರೆ ಹಿಡಿಯಲಾಯಿತು. ಒಂದು ತಾಯಿ ಹುಲಿ ಮತ್ತು ನಾಲ್ಕು ಮರಿಗಳು ಒಂದೆಡೆ ಇದ್ದರೆ, ಈ ಗಂಡು ಹುಲಿ ಪ್ರತ್ಯೇಕವಾಗಿತ್ತು. ನಂಜೇದೇವನಪುರದಲ್ಲಿ ಇದ್ದದ್ದು5 ಅಲ್ಲ 6 ಹುಲಿ ಎಂಬAತಾಗಿದೆ.
ಕಲ್ಪುರದಲ್ಲಿ ಕಳೆದ ತಿಂಗಳು ಕ್ಯಾಮರಾ ಟ್ರ‍್ಯಾಪ್‌ನಲ್ಲಿ ಕ್ಯಾಪ್ಚರ್ ಆಗಿದ್ದ ದೊಡ್ಡ ಗಾತ್ರದ ಹುಲಿ ಇದಾಗಿದೆ ಎನ್ನಲಾಗಿದೆ. ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ 100 ಕ್ಕೂ ಅಧಿಕ ಸಿಬ್ಬಂದಿ ಸದ್ಯ ಒಂದು ಹುಲಿ ಸೆರೆ ಹಿಡಿದಿದ್ದು ಆಪರೇಷನ್ 5 ಟೈಗರ್ಸ್ (ತಾಯಿ ಹುಲಿ ಜೊತೆ ನಾಲ್ಕು ಮರಿ ಹುಲಿಗಳು) ಕಾರ್ಯಾಚರಣೆ ಮುಂದುವರೆದಿದೆ.

