ಕರಾಚಿ : 2025 ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ ಟ್ರೋಫಿ ಗೆ ಭಾರತ ತಂಡವು ಪಾಕ್ ಗೆ ಭೇಟಿ ನೀಡದಿರುವುದು ಭಾಗಶಃ ಕನ್ಫರ್ಮ್ ಆಗಿದೆ. ಈಗಾಗಲೇ ಬಿಸಿಸಿಐ ಐಸಿಸಿ ಗೆ ಮನವಿಯನ್ನು ಸಲ್ಲಿಸಿದ್ದು. ತಟಸ್ಥ ದೇಶದಲ್ಲಿ ಪಾಕ್ ಮತ್ತು ಇಂಡೋ ಮ್ಯಾಚ್ ಗಳು ನಡೆಸುವಂತೆ ತಿಳಿಸಿದೆ. ಈ ಮಧ್ಯೆ ಪಾಕ್ ನ ಹಿರಿಯ ಆಟಗಾರರು ಭಾರತವು ಪಾಕಿಸ್ತಾನಕ್ಕೆ ಬರಲೇ ಬೇಕು ಎಂದು ಮನವಿಯನ್ನು ಮಾಡುತ್ತಿದ್ದಾರೆ.
ಪಾಕ್ ಮಾಜಿ ಆಟಗಾರ ಶೋಯಿಬ್ ಮಲಿಕ್ ಮಾತನಾಡಿ ” ದೇಶಗಳ ಮಧ್ಯೆ ಯಾವುದೇ ಸಮಸ್ಯೆಗಳಿರಲಿ ಅವುಗಳನ್ನು ಪರಿಹರಿಸಿಕೊಳ್ಳಬೇಕು. ಕ್ರೀಡೆಗೆ ರಾಜಕೀಯವನ್ನು ಬೆರೆಸುವುದು ಬೇಡ. ಕಳೆದ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ಭಾರತಕ್ಕೆ ಹೋಗಿ ಆಡಿತ್ತು. ಈಗ ಭಾರತಕ್ಕೆ ಪಾಕ್ ಗೆ ಬರಲು ಉತ್ತಮ ಅವಕಾಶ. ವಿರಾಟ್, ರೋಹಿತ್ ಶರ್ಮಾ ರವರು ಪಾಕ್ ನೆಲದಲ್ಲಿ ಆಡಿಯೇ ಇಲ್ಲ. ಇವರಿಗೆ ಪಾಕ್ ನಲ್ಲಿ ತುಂಬ ಅಭಿಮಾನಿಗಳಿದ್ದಾರೆ. ನಾವು ತುಂಬಾ ಒಳ್ಳೆಯವರು ಎಂದು ಹೇಳಿದ್ದಾರೆ.”
ಈ ಮೊದಲು ಯೂನಿಸ್ ಖಾನ್ ಕೂಡ ಕೊಹ್ಲಿ ಪಾಕ್ ಗೆ ಬಂದು ಆಡಬೇಕು ಎಂದು ಹೇಳಿದ್ದಾರೆ. ಕೊನೆಯದಾಗಿ ಭಾರತ ತಂದವು 2006 ರಲ್ಲಿ ಪಾಕ್ ನಲ್ಲಿ ಸರಣಿಯನ್ನು ಆಡಿತ್ತು. ಬಳಿಕ 2008 ಮುಂಬೈ ದಾಳಿಯಲ್ಲಿ 150 ಜನರು ಸಾವನ್ನಪ್ಪಿದ ನಂತರ ದ್ವಿಪಕ್ಷೀಯ ಕ್ರಿಕೆಟ್ ಗೆ ವಿರಾಮ ಹೇಳಿತು. 2008 ರ ಏಷ್ಯ ಕಪ್ ಆಡಲು ಪಾಕ್ ಗೆ ಭೇಟಿ ನೀಡಿತ್ತು. ಬಳಿಕ ಉಭಯ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾ ಮುಖಿಯಾಗುತ್ತವೆ.
ಆದಾಗ್ಯೂ ಕಳೆದ ವರ್ಷ ಕೂಡಾ ಪಾಕ್ ಎಷ್ಯಾ ಕಪ್ ಹೋಸ್ಟಿಗ್ ದೇಶವಾಗಿತ್ತು. ಆಗ ಕೂಡ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀ ಲಂಕದಲ್ಲಿ ಆಡಿತ್ತು. ಒಂದು ವೇಳೆ ಭಾರತವು ಟೂರ್ನಿಯನ್ನು ಆಡದೇ ಹೊರ ಉಳಿದರೆ ಲಂಕಾಗೆ ಚಾಂಪಿಯನ್ಸ್ ಟ್ರೋಫಿ ಯನ್ನು ಆಡುವ ಅವಕಾಶ ದೊರೆಯಲಿದೆ. ಸದ್ಯಕ್ಕೆ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ , ಅಫಘಾನಿಸ್ತಾನ , ಬಾಂಗ್ಲಾದೇಶ್ ತಂಡಗಳು ಅರ್ಹತೆ ಪಡೆದುಕೊಂಡಿವೆ.
