ಚನ್ನರಾಯಪಟ್ಟಣ: ಪಟ್ಟಣದ ಕುವೆಂಪು ಸರ್ಕಲ್ ನಲ್ಲಿ ನವೀನ್ ಕುಮಾರ್ ಮಾಲೀಕತ್ವದ ಪುನರ್ವಿಕಾ ಫರ್ನಿಚರ್ಸ್ ಗೃಹ ಉಪಯೋಗಿ ಮಾರಾಟ ಮಳಿಗೆಯನ್ನು ಶಾಸಕ ಸಿ.ಎನ್. ಬಾಲಕೃಷ್ಣ ಉದ್ಘಾಟನೆ ಮಾಡಿದರು.
ಉದ್ಘಾಟನೆ ನಂತರ ಮಾತನಾಡಿದ ಶಾಸಕ ಸಿಎನ್ ಬಾಲಕೃಷ್ಣ, ತಾಲೂಕಿನ ಜನತೆಗೆ ಇಂತಹ ಮಾರಾಟ ಮಳಿಗೆಯು ಅತ್ಯವಶ್ಯಕವಾಗಿ ಬೇಕಾಗಿತ್ತು, ಈ ಮಾರಾಟ ಮಳಿಗೆಯಲ್ಲಿ ದೊರೆಯುವ ಗೃಹ ಉಪಯೋಗಿ ವಸ್ತುಗಳನ್ನು ಖರೀದಿಸುವ ಮೂಲಕ ಸದ್ಬಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು.
ನವೀನ್ ಕುಮಾರ್ ಅವರ ಮಾಲೀಕತ್ವದ ಪುನರ್ವಿಕ ಫರ್ನಿಚರ್ ಶೋರೂಮ್ ಉದ್ಯಮವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಪುನರ್ವಿಕಾ ಸಂಸ್ಥೆ ಮಾಲೀಕ ನವೀನ್ ಕುಮಾರ್, ಟಿಎಪಿಎಂಎಸ್ ಮಾಜಿ ಉಪಾಧ್ಯಕ್ಷ ಸಿ ಜಿ ಜಗದೀಶ್, ಟಿಎಪಿಎಂಎಸ್ ನಿರ್ದೇಶಕ ಮರಗೂರು ಅನಿಲ್, ಜೆಡಿಎಸ್ ಮುಖಂಡ ಕರಡೆವು ಸತೀಶ್, ಅಂಕೇನಹಳ್ಳಿ ಮಹೇಶ್ ಸೇರಿ ಇತರರು ಹಾಜರಿದ್ದರು.