ಬೆಂಗಳೂರು: ಕೊಲೆ ಕೇಸಲ್ಲಿ ಅರೆಸ್ಟ್ ಆಗಿ ಅನ್ನಪೂರ್ಣೇಶ್ವರಿ ನಗರ ಪೊಲೀಸರ ವಶದಲ್ಲಿರುವ ದರ್ಶನ್ ಮತ್ತು ಗ್ಯಾಂಗ್ ಗೆ ಪೊಲೀಸರು ಚಿಕ್ಕಪೇಟೆ ಬಿರಿಯಾನಿ ತರಿಸಿಕೊಟ್ಟಿದ್ದಾರೆ.
ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಬಿರಿಯಾನಿ ಪಾರ್ಸೆಲ್ ತಂದ ಹೊಟೇಲ್ ಹುಡುಗರು, ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಪೊಲೀಸರು ಹೇಳಿದ್ದರು ನಾವು ತಂದಿದ್ದೇವೆ ಎಂಬ ಹೇಳಿಕೆ ಇದೀಗ ವೈರಲ್ ಆಗಿದೆ.
ಪೊಲೀಸರು ಯಾರೆನ್ನೇ ಬಂಧನಲ್ಲಿಟ್ಟುಕೊಂಡರು, ಅವರಿಷ್ಟದ ಊಟ ತರಿಸಿ ಕೊಡುವುದು ಮಾಮೂಲಿ. ಹೀಗಾಗಿ ಚಿಕ್ಕಪೇಟೆ ಬಿರಿಯಾನಿ ತರಿಸಿದ್ದಾರೆ. ಎಲ್ಲರಿಗೂ ಕೊಡುವಂತೆಯೇ ಸೆಲ್ ನಲ್ಲಿ ಚಾಪೆ ಮತ್ತು ಕಾರ್ಪೆಟ್ ಕೊಟ್ಟಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ವಿಶೇಷ ಸವಲತ್ತುಗಳೇನು ಕೊಟ್ಟಿಲ್ಲ ಎಂಬುದು ಸತ್ಯ.
ಈ ನಡುವೆ ಚಿಕ್ಕಪೇಟೆ ಬಿರಿಯಾನಿ ತರಿಸಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಗೆಬಗೆಯ ಕಮೆಂಟ್ ಗಳು ಬಂದಿವೆ. ಅದರಲ್ಲೂ ಬಿಗ್ ಬಾಸ್ ಖ್ಯಾತಿಯ ಪ್ರಥಮ್, “ನಾನು ಇನ್ಮುಂದೆ ಚಿಕ್ಕಪೇಟೆ ಬಿರಿಯಾನಿ ತಿನ್ನೋದು ಬಿಡ್ತೀನಿ, ಯಾಕಂದ್ರೆ ಸ್ವಲ್ಪ ವಾದ್ರೂ ಸಾತ್ವಿಕವಾಗಿ ಬದುಕಬೇಕೆಂಬ ಬಯಕೆ ನನ್ನದು” ಎಂದು ಬರೆದುಕೊಂಡಿದ್ದಾರೆ. ಇನ್ನೂ ಅನೇಕ ನೆಟ್ಟಿಗರು, ತಮ್ಮ ತಮ್ಮ ಕಮೆಂಟ್ ದಾಖಲಿಸಿದ್ದಾರೆ.

