ಚಿಕ್ಕಮಗಳೂರು: ಮದುವೆ ಮನೆಗೆ ನುಗ್ಗಿದ ಯುವತಿಯೊಬ್ಬಳು, ವರನಿಂದ ಮೋಸ ಹೋಗಿರುವುದಾಗಿ ತಿಳಿಸಿ ರಂಪಾಟ ನಡೆಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ನಗರದ ಕಲ್ಯಾಣ ಮಂಟಪದಲ್ಲಿ ಶರತ್ ಎಂಬಾತನ ಮದುವೆ ಬೇರೊಂದು ಯುವತಿಯ ಜತೆಗೆ ನಡೆಯುತ್ತಿದ್ದು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಮತ್ತೊಬ್ಬ ಯುವತಿ, ಆತ ನನ್ನೊಂದಿಗೆ ಪೀತಿಯ ನಾಟಕವಾಡಿ ಮೋಸ ಮಾಡಿದ್ದು, ಇದೀಗ ಬೇರೆ ಮದುವೆಯಾಗುತ್ತಿದ್ದಾನೆ ಎಂದು ರಂಪಾಟ ನಡೆಸಿರುವ ಘಟನೆ ನಡೆದಿದೆ.
ಪ್ರಿಯಕರ ಶರತ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಯುವತಿ, ಆತ ಹತ್ತು ವರ್ಷದಿಂದ ನನ್ನೊಂದಿಗೆ ಪ್ರೀತಿಯ ನಾಟಕವಾಡಿದ್ದಾನೆ. ಇದೀಗ ಬೇರೊಂದು ಯುವತಿಯ ಜತೆಗೆ ಮದುವೆಗೆ ಮುಂದಾಗಿದ್ದಾನೆ. ನನಗೆ ನ್ಯಾಯ ಬೇಕು ಎಂದು ರಂಪಾಟ ಮಾಡಿದ್ದಾಳೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
