ಹೈದರಾಬಾದ್: ಹೈದರಾಬಾದ್‌ನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದ ಮಕ್ಕಳ ಮಾರಾಟ ಜಾಲದ ಫಲವಾಗಿ ಎರಡು ತಿಂಗಳ ಹಸುಳೆಯೊಂದು ಅನಾಥವಾಗಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೃತಕ ಗರ್ಭಧಾರಣೆಯ ಮೂಲಕ ಮಗು ಜನಿಸಿದೆ ಎಂದು 36 ಲಕ್ಷ ರು.ಗಳ ಶುಲ್ಕ ಪಡೆದು, ಮಗು ಸರೋಗಸಿ ಮೂಲಕ ಜನಿಸಿದೆ ಎಂದು ಹೇಳಿದ್ದರು.
ಆದರೆ, ಪ್ರಕರಣದಲ್ಲಿ ಆಸ್ಪತ್ರೆಯ ಮುಖ್ಯಸ್ಥರು ಸೇರಿ ಎಂಟು ಜನ ಆರೋಪಿಗಳನ್ನು ಬಂಧಿಸಿದ ನಂತರ ನಡೆಸಿದ ಡಿಎನ್‌ಎ ಪರೀಕ್ಷೆಯಲ್ಲಿ ಅಸ್ಸಾಂ ಮೂಲದ ಜೋಡಿಯೊಂದು ಮಗುವನ್ನು ಆಸ್ಪತ್ರೆಗೆ 90 ಸಾವಿರ ರು.ಪಡೆದು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಇದೀಗ ಡಿಎನ್‌ಎಯಲ್ಲಿ ಮಗು ತಮ್ಮದಲ್ಲ ಎಂದು ಪತ್ತೆಯಾದ ಹಿನ್ನೆಲೆಯಲ್ಲಿ ಮಗುವನ್ನು 35 ಲಕ್ಷ ಕೊಟ್ಟು ಪಡೆದಿದ್ದ ಪೋಷಕರು ಕರೆದೊಯ್ಯಲು ನಿರಾಕರಿಸಿದ್ದರೆ, ನಿಜವಾದ ತಂದೆ-ತಾಯಿ ಮಕ್ಕಳ ಮಾರಾಟ ಜಾಲದೊಂದಿಗೆ ಕೈಜೋಡಿಸಿದ ಕಾರಣಕ್ಕೆ ಜೈಲಿನಲ್ಲಿದ್ದಾರೆ.
ಹೀಗಾಗಿ,ಮಗು ಇದೀಗ ಹೆತ್ತವರು ಇಲ್ಲದೆ ಹೈದರಾಬಾದ್‌ನ ಶಿಶುವಿಹಾರದಲ್ಲಿದೆ. ವಿಚಾರಣೆಗೆ ಮುಗಿಯುವವರೆಗೆ ಮಗು ಶಿಶು ವಿಹಾರದಲ್ಲಿಯೇ ಇರಲಿದೆ ಎಂದು ಪೊಲೀಸರು ಹೇಳಿದ್ದಾರೆ. ಎರಡು ತಿಂಗಳ ಅವಧಿಯಲ್ಲಿ ಜೈವಿಕ ಪೋಷಕರು ಅಥವಾ ಮಗುವನ್ನು ಪಡೆದಿದ್ದ ದೂರುದಾರರು ಮುಂದೆ ಬಂದು ಮಗುವನನು ಪಡೆದುಕೊಳ್ಳಲು ಅವಕಾಶವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.