ಚಿತ್ರದುರ್ಗ: ಜಿಲ್ಲೆಯಲ್ಲಿ ನಡೆದಿರುವ ಬಸ್ ದುರಂತದಲ್ಲಿ ಮೃತಪಟ್ಟಿರುವ ಎಂಟು ಜನರ ಶವಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಹೆತ್ತವರು ಶವ ಗುರುತಿಸಲು ಪರದಾಟ ನಡೆಸುತ್ತಿದ್ದಾರೆ.
ಬದುಕುಳಿದವರನ್ನು ಹೊರತುಪಡಿಸಿ, ಉಳಿದರ‍್ಯಾರ ಶವವನ್ನು ಈವರೆಗೆ ಗುರುತಿಸಲು ಸಾಧ್ಯವಾಗಿಲ್ಲ. ಇನ್ನು ಇಬ್ಬರು ಯುವತಿಯರು ಮೃಥಪಟ್ಟಿದ್ದಾರೋ ಅಥವಾ ಬಸ್‌ನಿಂದ ಕೆಳಗಿಳಿದು ಹೋಗಿದ್ದಾರೋ ಎಂಬುದೇ ಈವರೆಗೆ ಪತ್ತೆಯಾಗಿಲ್ಲ.
ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಬಳಿ ಕುಟುಂಬಸ್ಥರು ಆಕ್ರಂಧನ ಹೊರಹಾಕುತ್ತಿದ್ದು, ಶವಗಳನ್ನು ಡಿಎನ್‌ಎ ಪರೀಕ್ಷೆಯ ಮೂಲಕ ಗುರುತಿಸಿ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಸ್ಥಳಕ್ಕೆ ಆಗಮಿಸಿದ್ದು, ಶವ ಗುರುತಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ.

