ಚಿತ್ರದುರ್ಗ:ಮದುವೆ ಮಾಡಲಿಲ್ಲ ಎಂದು ಅಪ್ಪನನ್ನೇ ಕೊಂದ ಮಗ
ಚಿತ್ರದುರ್ಗ: ಮದುವೆ ಮಾಡಲಿಲ್ಲ ಎಂದು ತಂದೆಯೊಂದಿಗೆ ಜಗಳ ತೆಗೆದಿದ್ದ ಮಗ, ಮಲಗಿದ್ದಾಗ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹೊಸದುರ್ಗ ತಾಲೂಕಿನ ಅತ್ತಿಘಟ್ಟ ಗ್ರಾಮದ ನಿಂಗಪ್ಪ(65) ಕೊಲೆಯಾದ ದುರ್ದೈವಿ. ಆತನ ಪುತ್ರ ನಿಂಗರಾಜು ಕೊಲೆ ಮಾಡಿದ ಆರೋಪಿ. ಪ್ರಕರಣ ಸಂಬಂಧ ಹೊಸದುರ್ಗ ಪೊಲೀಸ್ ಠಾಣೆ ಪೊಲೀಸರು ಮಗನನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡಿದ್ದಾರೆ.
ತಮಗೆ ಮದುವೆ ಮಾಡುತ್ತಿಲ್ಲ ಎಂಬ ಕಾರಣಕ್ಕೆ ನಿಂಗರಾಜು ತಂದೆಯೊಂದಿಗೆ ಜಗಳ ತೆಗೆದಿದ. ಜಗಳದ ನಂತರ ನಿಂಗಪ್ಪ ಮಲಗಿದ್ದ ಸಂದರ್ಭದಲ್ಲಿ ನಿಂಗರಾಜು, ರಾಡಿನಿಂದ ತಂದೆಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.


