ಬೆಂಗಳೂರು: ವಾಲ್ಮೀಕಿ ನಿಗಮ ಹಗರಣ ರಾಜ್ಯಾದ್ಯಂತ ಸದ್ದು ಗದ್ದಲಕ್ಕೆ ಕಾರಣವಾಗ್ತಿದೆ. ಸದನದಲ್ಲೂ ಈ ಹಗರಣ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ದಲಿತರ ಹಣವನ್ನು ಸರ್ಕಾರ ಲೂಟಿ ಮಾಡಿದೆ ಎಂಬ ಆರೋಪವನ್ನು ಬಿಜೆಪಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸುದೀರ್ಘವಾದ ಉತ್ತರವನ್ನು ಸದನದಲ್ಲಿ ಶುಕ್ರವಾರ ನೀಡಿದ್ದಾರೆ.
ಅಲ್ಲದೆ, ನಿಗಮ ಖಾತೆಯಿಂದ ವರ್ಗಾವಣೆ ಆದ ಎಷ್ಟು ಪ್ರಮಾಣದ ಹಣವನ್ನು ಎಸ್ಐಟಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿಯನ್ನು ಅವರು ವಿವರಿಸಿದ್ದಾರೆ.
ಯಾರಿಂದ ಎಷ್ಟು ವಶಕ್ಕೆ?
ಸತ್ಯನಾರಾಯಣ ವರ್ಮಾ – 8,21 ಕೋಟಿ ರೂ.
ಪದ್ಮನಾಭ ಜೆ.ಜಿ.- 3. 62 ಕೋಟಿ ರೂ
ಪದ್ಮನಾಭ ಜೆ.ಜಿ – 30 ಕೋಟಿ ರೂ.
ನಾಗೇಶ್ವರ ರಾವ್ – 1.49 ಕೋಟಿ ರೂ.
ಚಂದ್ರಮೋಹನ್ – 30 ಕೋಟಿ ರೂ.
ಜಿ.ಕೆ. ಜಗದೀಶ್ – 12.50 ಕೋಟಿ ರೂ.
ಸತ್ಯನಾರಾಯಣ ವರ್ಮಾ – 3.10 ಕೋಟಿ ರೂ.
ಸತ್ಯನಾರಾಯಣ ವರ್ಮಾ – 24 ಕೋಟಿ ರೂ.
ಚಂದ್ರಮೋಹನ್ -207 ಗ್ರಾಂ ಚಿನ್ನ, ಮೌಲ್ಯ – 13.50 ಕೋಟಿ ರೂ.
ಜಿ.ಕೆ. ಜಗದೀಶ್ -47.6 ಗ್ರಾಂ ಚಿನ್ನ, ಮೌಲ್ಯ – 3.09 ಕೋಟಿ ರೂ.
217 ಬ್ಯಾಂಕ್ ಖಾತೆ ಫ್ರೀಜ್!
ಇದಲ್ಲದೆ ವಿವಿಧ 217 ಬ್ಯಾಂಕ್ ಅಕೌಂಟ್ ಗಳನ್ನು ಗುರುತಿಸಿ ಅವುಗಳಲ್ಲಿದ್ದ 13,72,94,132 ರೂ.ಗಳನ್ನು ಫ್ರೀಜ್ ಮಾಡಲಾಗಿರುತ್ತದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಸತ್ಯನಾರಾಯಣ ವರ್ಮಾ ಮತ್ತು ಇತರೆ ಆರೋಪಿಗಳು ಅಕ್ರಮವಾಗಿ ಬೇರೆ ವ್ಯಕ್ತಿಗಳ ಖಾತೆಗಳಿಗೆ ವರ್ಗಾಯಿಸಿದ್ದ 1.50 ಕೋಟಿ ರೂ. ಹಣವನ್ನು ಜನರೇ ವಾಪಾಸ್ ಕಟ್ಟಿದ್ದಾರೆ. ಆ ಹಣ ಕೂಡ ಸರ್ಕಾರದಲ್ಲಿದೆ ಎಂಬ ಮಾಹಿತಿಯನ್ನು ಸಿಎಂ ನೀಡಿದ್ದಾರೆ.
ಲ್ಯಾಂಬೋರ್ಗಿನಿ ಉರಸ್ ಕಾರು ಖರೀದಿ ಮಾಡಿದ್ದ ಆರೋಪಿ!
ಎಸ್.ಐ.ಟಿ.ಯು ಸತ್ಯನಾರಾಯಣ ವರ್ಮಾ ಲ್ಯಾಂಬೋರ್ಗಿನಿ ಉರಸ್ ಎಂಬ ಕಾರ್ನ್ನು ಬಿಗ್ಬಾಯ್ಸ್ ಟಾಯ್ಸ್ ಲಿ. ಕಂಪನಿ ಮೂಲಕ ಖರೀದಿ ಮಾಡಿದ್ದ. ಈಗ ಆ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಂಪನಿ ಕಾರನ್ನು ವಾಪಸ್ ಪಡೆದು 3,31,19,166 ರೂ. ಹಣವನ್ನು ಸರ್ಕಾರಕ್ಕೆ ಮರಳಿಸುವುದಾಗಿ ಸಂಬಂಧಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ.