ಸಿಎಂ ಸಿದ್ದರಾಮಯ್ಯರಿದ್ದ ಬಸ್ ತಡೆದು ಚುನಾವಣಾಧಿಕಾರಿಗಳಿಂದ ತಪಾಸಣೆ!

6
Share It

ಬೆಂಗಳೂರು : ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣೆ ಪ್ರಚಾರಕ್ಕೆ ತೆರಳುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೈಟೆಕ್ ಬಸ್ಸನ್ನು ಹೆದ್ದಾರಿಯ ಅರ್ಧದಲ್ಲೇ ತಡೆದ ಚುನಾವಣಾಧಿಕಾರಿಗಳು ಇಂಚಿಂಚೂ ತಪಾಸಣೆ ನಡೆಸಿದ್ದಾರೆ.

ಮುಖ್ಯಮಂತ್ರಿಗಳು ಭದ್ರತೆಯ ಕಾನ್‍ವೇಯೊಂದಿಗೆ ಚಿಕ್ಕಬಳ್ಳಾಪುರಕ್ಕೆ ತೆರಳುತ್ತಿದ್ದರು. ಹೆದ್ದಾರಿಯ ಚೆಕ್‍ ಪೋಸ್ಟ್ ಬಳಿ ಬಸ್ಸನ್ನು ತಡೆದ ಚುನಾವಣಾ ವೀಕ್ಷಕರು ಸ್ಥಳೀಯ ಅಧಿಕಾರಿಗಳ ಸಹಾಯದೊಂದಿಗೆ ಸಂಪೂರ್ಣ ತಪಾಸಣೆ ನಡೆಸಿದರು.

ಈ ವೇಳೆ ಮುಖ್ಯಮಂತ್ರಿಯವರು ಬಸ್ ಒಳಗೇ ಕುಳಿತಿದ್ದು ತಪಾಸಣೆಗೆ ಸಹಕಾರ ನೀಡಿದರು. ಸಾರ್ವಜನಿಕರು ಮುಖ್ಯಮಂತ್ರಿಯವರನ್ನು ಕುತೂಹಲದಿಂದ ವೀಕ್ಷಿಸಿದಲ್ಲದೆ ಫೋಟೊ ತೆಗೆದುಕೊಂಡರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರ ಪರವಾಗಿ ಪ್ರಚಾರ ನಡೆಸಲು ಸಿಎಂ ಸಿದ್ದರಾಮಯ್ಯ ತೆರಳಿದ್ದರು. ಸಿಎಂ ಸಿದ್ದರಾಮಯ್ಯ ಪ್ರಚಾರಕ್ಕಾಗಿಯೇ ಹೈಟೆಕ್ ಬಸ್ಸನ್ನು ಸಿದ್ಧಗೊಳಿಸಲಾಗಿತ್ತು.


Share It

You cannot copy content of this page