ಬೆಂಗಳೂರು: ಟಾಕ್ಸಿಕ್ ಟೀಸರ್‌ನಲ್ಲಿ ವಿಪರೀತ ಅಶ್ಲೀಲವನ್ನು ತೋರಿಸಲಾಗಿದೆ ಎಂದು ಆರೋಪಿಸಿ ಸೆನ್ಸಾರ್ ಮಂಡಳಿಗೆ ದೂರು ದಾಖಲಿಸಲಾಗಿದೆ.
ವಕೀಲರಾದ ಲೋಹಿತ್ ಹನುಮಾಪುರ ಎಂಬುವವರು ದೂರು ನೀಡಿದ್ದು, ಸಿನಿಮಾ ಕುಟುಂಬ ಸಮೇತ ಕುಳಿತು ನೋಡುಂತಹದ್ದಾಗಿಲ್ಲ. ಟ್ರೆöÊಲರ್ ನಲ್ಲಿಯೇ ಇಷ್ಟೊಂದು ಅಶ್ಲೀಲವನ್ನು ತೋರಿಸಿರುವ ಚಿತ್ರತಂಡ ಸಿನಿಮಾದಲ್ಲಿ ಇನ್ನೆಷ್ಟು ಅಶ್ಲೀಲವನ್ನು ತೋರಿಸಲಿದೆಯೋ ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಟಾಕ್ಸಿಕ್ ಟ್ರೆöÊಲರ್ ವಿಪರೀತ ವೈರಲ್ ಆಗಿದ್ದು, ಕೆಜೆಎಫ್ ದಾಖಲೆಯನ್ನು ಮುರಿದು ಮುಂದೆ ಸಾಗಿದೆ. ಈ ನಡುವೆಯೂ ಸಾಮಾಜಿಕ ಜಾಲತಾಣದಲ್ಲಿ ಟ್ರೆöÊಲರ್ ನಲ್ಲಿರುವ ದೃಶ್ಯದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಹೀಗಾಗಿ, ಸೆನ್ಸಾರ್ ಮಂಡಳೀಗೆ ದೂರು ನೀಡಲಾಗಿದೆ.

