ಕಾಂಗ್ರೆಸ್ ಮುಖಂಡ ಸತೀಶ್ ರೆಡ್ಡಿ ಗನ್‌ಮ್ಯಾನ್ ಗುಂಡಿನಿಂದಲೇ ರಾಜಶೇಖರ್ ಸತ್ತಿದ್ದು !
ದಾವಣಗೆರೆ: ಸತೀಶ್ ರೆಡ್ಡಿ ಗನ್‌ಮ್ಯಾನ್‌ಗಳು ಫೈರಿಂಗ್ ಮಾಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದು, ಪ್ರಕರಣದಲ್ಲಿ ಪೋಲಿಸರ ವೈಫಲ್ಯ ಹೆಚ್ಚಿದೆ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಮಧ್ಯಾಹ್ನ 2.30ಕ್ಕೆ ಗಲಾಟೆ ಶುರುವಾಗಿದೆ, ಪೊಲೀಸರು ಅದನ್ನು ತಡೆಯಬಹುದಿತ್ತು. ಆದರೆ, ಸ್ಥಳಕ್ಕೆ ಪೊಲೀಸರೇ ಹೋಗಿಲ್ಲ. ಈ ವೇಳೆ ಸತೀಶ್ ರೆಡ್ಡಿಗೆ ಸಿಕ್ಕಾಪಟ್ಟೆ ಹೊಡೆಯಲಾಗಿದೆ. ಈ ವೇಳೆ ಅವರ ಗನ್ ಮ್ಯಾನ್‌ಗಳು ಹಾರಿಸಿದ ಗುಂಡಿನಿAದ ರಾಜಶೇಖರ್ ರೆಡ್ಡಿ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.
ಶಾಸಕ ಭರತ್ ರೆಡ್ಡಿ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಭರತ್ ರೆಡ್ಡಿ ಸ್ಥಳಕ್ಕೆ ಬಂದಿರಲಿಲ್ಲ ಅಂದ್ರೆ ಇನ್ನೂ ಹೆಚ್ಚು ಸಮಸ್ಯೆ ಆಗ್ತಿತ್ತು. ಭರತ್ ರೆಡ್ಡಿ 7 ಗಂಟೆ ಮೇಲೆ ಘಟನಾ ಸ್ಥಳಕ್ಕೆ ಬಂದಿರೋದು. ಸತೀಶ್ ರೆಡ್ಡಿ ಸಂಜೆ 4.30ಕ್ಕೆ ಸ್ಥಳಕ್ಕೆ ಹೋಗಿರೋದು. ಎಸ್‌ಪಿ, ಐಜಿ ಅಲ್ಲಿಯವರೆಗೂ ಘಟನಾ ಸ್ಥಳಕ್ಕೆ ಹೋಗಿಲ್ಲ ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದರು.


