ಬಾಗಲಕೋಟೆ :ಕೃಷ್ಣಾ ಮೇಲ್ದಂಡೆ ಯೋಜನೆ ಇಷ್ಟೊಂದು ಹಿನ್ನಡೆಯಾಗಲು ಕಾಂಗ್ರೆಸ್ ಪಾತ್ರ ಬಹಳ ದೊಡ್ಡದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವ ಡಿಸಿಎಂ ಡಿ.ಕೆ. ಶಿವಕುಮಾರ್ ರಾಜಕೀಯ ಸಲುವಾಗಿ ಆರೋಪ ಮಾಡಬೇಡಿ, ರಾಜ್ಯದ ವಕೀಲರು ಸರಿಯಾಗಿ ವಾದ ಮಾಡಿ ಸುಪ್ರೀಂ ಕೊರ್ಟ್ ನಲ್ಲಿ ರಾಜ್ಯದ ಪರ ಆದೇಶ ಬರುಂವತೆ ಮಾಡಿ, ಕೋರ್ಟ್ ನಿಂದ ಆದೇಶ ಬಂದು ಒಂದು ತಿಂಗಳಲ್ಲಿ ಒಳಗಡೆ ಕೆಂದ್ರದಿಂದ ಆದೇಶ ಮಾಡಿಸುವ ಕೆಲಸ ನಾವು ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಯುಕೆಪಿ ಬಗ್ಗೆ ಚುನಾವಣೆ ಬಂದಿದೆ ಅಂತ ಚರ್ಚೆ ಆಗುತ್ತಿದೆ. ಉಳಿದ ಸಮಯದಲ್ಲಿ ಸರ್ಕಾರದಲ್ಲಿ ಯಾರೂ ಚಕಾರ ಎತ್ತುವುದಿಲ್ಲ. ಯುಕೆಪಿ ಸ್ಟೇಜ್ 1 ಬಚಾವತ್ ಆಗೋಗದಿಂದ 1975 ರಲ್ಲಿ ಆದೇಶ ಬಂತು. ಆಗ ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಇತ್ತು. ಕೇವಲ ಡಿಪಿಆರ್ ಮಾಡಲು 14 ವರ್ಷ ತೆಗೆದುಕೊಂಡಿತು. ಕಾಂಗ್ರೆಸ್ ಸರಕಾರ ಮತ್ತು ಕಾಂಗ್ರೆಸ್ಸೇತರ ಸರ್ಕಾರದ ಅವಧಿಯಲ್ಲಿ ಏನಾಗಿದೆ ಎನ್ನುವ ತಲುನಾತ್ಮಕ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ಇಷ್ಟೊಂದು ಹಿನ್ನಡೆಯಾಗಲು ಕಾಂಗ್ರೆಸ್ ನ ಪಾತ್ರ ಬಹಳ ದೊಡ್ಡದಿದೆ. ನಮ್ಮ ಅವಧಿಯಲ್ಲಿ 2009 ರಲ್ಲಿ ಇನ್ನೂ ಆದೇಶ ಆಗದಿದ್ದರೂ ಮುಳವಾಡ, ಚಿಮ್ಮಲಗಿ, ಗುತ್ತಿ ಬಸವಣ್ಣ ಕೊಪ್ಪಳ ಏತ ನೀರಾವರಿ ಯೋಜನೆಗಳಿಗೆ ನಾನೇ ಅನುಮೊದನೆ ಕೊಟ್ಟು ಯೋಜನೆ ಆರಂಭಿಸಿದ್ದೇವು. ಕಾಂಗ್ರೆಸ್ ನವರು ಬರೇ ಎ ಸ್ಕಿಮ್ ಬಿ ಸ್ಕೀಮ್ ಅಂತ ಹೇಳುವವರು. ಮುಳವಾಡ, ಚಿಮ್ಮಲಗಿ ಏತ ನೀರಾವರಿ ಈಗಾಗಲೇ ಮಾಡಿದ್ದೇವೆ. ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿ ಮಾಡುವಲ್ಲಿ ಅತಿ ಹೆಚ್ಚು ಕೊಡುಗೆ ಇರುವುದು ಕಾಂಗ್ರೆಸ್ಸೇತರ ಸರ್ಕಾರದಿಂದ. ಕೆರೂರು ಏತ ನಿರಾವರಿ ನಾವೇ ಮಾಡಿ ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕರಿದ್ದಾಗ ನಾವೇ ಕರೆದುಕೊಂಡು ಬಂದು ಉದ್ಘಾಟನೆ ಮಾಡಿದ್ದೆವೆ. ಕೆರೆ ತುಂಬಿಸುವ ಯೊಜನೆ ನಾವೇ ಮಾಡಿದ್ದೇವೆ ಎಂದು ವಿವರಿಸಿದರು.
ರಾಜಕೀಯಕ್ಕಾಗಿ ಸುಳ್ಳು: ಕೇಂದ್ರ ಸರ್ಕಾರ ಗೆಜೆಟ್ ನೊಟಿಫಿಕೇಶನ್ ಹೊರಡಿಸುತ್ತಿಲ್ಲ ಅಂತ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಆರೋಪ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಯರೆಡ್ಡಿಯವರಿಗೆ ಆಗಾಗ ಜ್ಞಾನ ಮರೆಯಾಗುತ್ತಿದೆ. ಕೃಷ್ಣಾ ಬಿ ಸ್ಕೀಮ್ ಮಾಡಲು ಬರುವುದಿಲ್ಲ ಅಂತ ಹೇಳಿದ್ದರು. ನಾವು ಅವರ ಕೆರೆಗೆ ನೀರಿ ತುಂಬಿಸಿದ್ದು ಅವರೇ ಉದ್ಘಾಟನೆ ಮಾಡಿದ್ದರು.
ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಕರ್ನಾಟಕ ನಾಲ್ಕು ರಾಜ್ಯಗಳು ಸುಪ್ರೀಂ ಕೋರ್ಟನಲ್ಲಿ ಅರ್ಜಿ ಹಾಕಿರುವುದರಿಂದ ಕೋರ್ಟ್ ನಲ್ಲಿ ವಾದ ನಡೆಯುತ್ತಿದೆ. ಮೂರು ರಾಜ್ಯಗಳ ವಾದ ಮುಗಿದಿದೆ. ಅದು ಮುಗಿದರೆ ಟ್ರಿಬ್ಯುನಲ್ ಆದೇಶ ಸುಪ್ರೀಂ ಕೋರ್ಡ್ ಡಿಕ್ರಿ ಅಂತ ಹೇಳಿದ್ದೇನೆ. ಜಲ ಸಂಪನ್ಮೂಲ ಸಚಿವರಾಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯ ಸಲುವಾಗಿ ಆರೋಪ ಮಾಡಬೇಡಿ, ರಾಜ್ಯದ ವಕೀಲರಿಗೆ ಸರಿಯಾಗಿ ವಾದ ಮಾಡಿ ಸುಪ್ರೀಂ ಕೊರ್ಟ್ ನಲ್ಲಿ ರಾಜ್ಯದ ಪರ ಆದೇಸ ಬರುವಂತೆ ಮಾಡಿ, ಕೋರ್ಟ್ ನಿಂದ ಆದೇಶ ಬಂದು ಒಂದು ತಿಂಗಳಲ್ಲಿ ಕೆಂದ್ರದಿಂದ ಆದೇಶ ಮಾಡಿಸುವ ಕೆಲಸ ನಾವು ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರಿಗೂ ಇದನ್ನೇ ಹೇಳುತ್ತೇನೆ ಎಂದು ಹೇಳಿದರು.
ಮಹಾದಾಯಿಗೆ ರಾಜ್ಯದ ಅಡ್ಡಿ: ಮಹದಾಯಿ ವಿಚಾರದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಹದಾಯಿಗೆ ಅರಣ್ಯ ಇಲಾಖೆ ಅನುಮತಿ ಇದೆ. ವೈಲ್ಡ್ ಲೈಫ್ ನಿಂದ ಅನುಮತಿ ಬೇಕು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಕೊರ್ಟ್ ಗೆ ಹೋಗಿದ್ದಾರೆ ಇವರೆ ಕೊರ್ಟ್ ಗೆ ಹೋಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸಿಎಂ ದಾಖಲೆ ಸಾಲ: ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸರ್ಕಾದ ಅವಧಿಯಲ್ಲಿ 5.30 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸಿಎಂ ಬಹಳ ಸುಳ್ಳು ಹೇಳಿ ಸುಳ್ಳು ರಾಮಯ್ಯ ಆಗಿದ್ದಾರೆ. ಕಾಂಗ್ರೆಸ್ ಗೆ ನಿಷ್ಟೆ ತೋರಿಸಲು ಹೋಗಿ ಸುಳ್ಳು ಹೇಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು 2013 ರಿಂದ 2018 ರ ವರೆಗೆ ಮತ್ತು ಈಗಿನ ಅವಧಿಯಲ್ಲಿ 5,55,573.44 ಕೋಟಿ ಸಾಲ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿ ಯಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮತ್ತಿತರರು ಹಾಜರಿದ್ದರು.


