ಅತಿವೇಗದಲ್ಲಿ ಕಂಟೈನರ್ ಚಾಲನೆ: ಮೂವರಿಗೆ ಗಂಭೀರ ಗಾಯ: ಚಾಲಕನಿಗೆ ಗೂಸಾ
ಆನೇಕಲ್ : ಅತಿವೇಗ ಹಾಗೂ ಅಜಾಗರೂಕತೆಯಿಂದ ಕಂಟೇನರ್ ಚಾಲನೆ ಮಾಡಿದ ಚಾಲಕ, ನಾಲ್ಕು ಕಾರು, ಎರಡು ಬೈಕ್ ಮತ್ತು ಒಂದು ಆಟೋಗೆ ಡಿಕ್ಕಿ ಹೊಡೆದಿರುವ ಘಟನೆ ಆನೇಕಲ್ ಸಮೀಪದ ಅತ್ತಿಬೆಲೆ ಬಳಿ ನಡೆದಿದೆ.
ಘಟನೆಯಲ್ಲಿ ಓರ್ವ ಮಹಿಳೆಯ ಕಾಲು ಮುರಿತ ಸೇರಿ ಐವರಿಗೆ ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ಆನೇಕಲ್ ತಾಲೂಕಿನಲ್ಲಿ ಭಾನುವಾರ ನಡೆದಿದೆ. ಅತ್ತಿಬೆಲೆ-ಆನೇಕಲ್ ಮಾರ್ಗವಾಗಿ ಬಂದ ಆದಿತ್ಯ ಬಿರ್ಲಾ ಕಾರ್ಗೋ ಶಿಪ್ಟಿಂಗ್ ಕಂಟೇನರ್‌ನ ಚಾಲಕ ಪಾನಮತ್ತನಾಗಿದ್ದು, ಬೆಸ್ತಮಾನಹಳ್ಳಿಯ ಮುಖ್ಯರಸ್ತೆಯಲ್ಲಿ ಆಟೋವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ.
ಈ ಡಿಕ್ಕಿಯ ರಭಸಕ್ಕೆ ಆಟೋದಲ್ಲಿದ್ದ ಮಹಿಳೆ ರಸ್ತೆಗೆ ಹಾರಿಬಿದ್ದ ಪರಿಣಾಮ ಕಾಲಿಗೆ ಏಟಾಗಿ ಕಾಲು ಮುರಿದಿದೆ. ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ತಕ್ಷಣ ಕಂಟೇನರ್ ಕ್ಲೀನರ್ ಓಂ ನಾರಾಯಣ್ ಪಟೇಲ್ ಲಾರಿಯಿಂದ ಜಿಗಿದು ತಪ್ಪಿಸಿಕೊಂಡಿದ್ದ. ಬಳಿಕ ಆತ ಆನೇಕಲ್ ಪೊಲೀಸರ ಕೈಗೆ ಸಿಕ್ಕಿದ್ದಾನೆ.
ಅಲ್ಲಿಂದ ವೇಗವಾಗಿ ಚಲಿಸುವ ಭರದಲ್ಲಿ ಕೋರ್ಟ್ ಮುಭಾಗದಲ್ಲಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಅನಂತರ ಚಂದಾಪುರ ಕಡೆಗೆ ತಿರುಗಿಸಿ, ಅಲ್ಲಿಯೂ ಮತ್ತೆರೆಡು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಚಾಲಕನ ವರ್ತನೆಗೆ ಬೇಸತ್ತ ಸಾರ್ವಜನಿಕರು ಆತನಿಗೆ ಮನಸೋಯಿಚ್ಛೆ ಥಳಿಸಿದ್ದಾರೆ. ಹೀಗಾಗಿ, ಆತನ ಸ್ಥಿತಿ ಗಂಭೀರವಾಗಿದೆ.


