ಕ್ರಿಶ್ಚಿಯನ್ ಅಧಿಕಾರಿ ನೇಮಕ ಎಂದು ಸುಳ್ಳು ಸುದ್ದಿ ಹರಡಿದವರ ವಿರುದ್ಧ ಸಚಿವ ರಾಮಲಿಂಗ ರೆಡ್ಡಿ ಕಿಡಿ
ಕುಕ್ಕೆ ಸುಬ್ರಮಣ್ಯ ದೇವಸ್ಥಾನಕ್ಕೆ ಆಡಳಿತಾಧಿಕಾರಿ ಹಿಂದೂನಾ ಕ್ರಿಶ್ಚಿಯನ್ನಾ? ಎಂಬ ವಿವಾದ ತಾರಕಕ್ಕೆ
ಬೆಂಗಳೂರು: ರಾಜ್ಯದ ಪ್ರತಿಷ್ಠಿತ ದೇವಸ್ಥಾನ ವಾದ ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಹುದ್ದೆಗೆ ಸಂಬಂಧಿಸಿದಂತೆ ಭಾರಿ ವಿವಾದ ಉಂಟಾಗಿದೆ.
ರಾಜ್ಯ ಸರಕಾರ ದೇವಸ್ಥಾನದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ಯೇಸುರಾಜ್ ಅವರನ್ನು ನೇಮಕಗೊಳಿಸಿದೆ. ಅವರು ಅಧಿಕಾರ ಸ್ವೀಕಾರ ಮಾಡಿದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಪ್ರಕಟವಾದ ಈ ಸುದ್ದಿಯನ್ನಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಸೃಷ್ಟಿಸಲಾಗುತ್ತಿದೆ.
ಯೇಸುರಾಜ್ ಹೆಸರುಬಕೇಳುತ್ತಿದ್ದಂತೆ ಎಚ್ವರಗೊಂಡ ಕೆಲ ಸಾಮಾಜಿಕ ಜಾಲತಾಣದ ಕಿಡಿಗೇಡಿಗಳು, ರಾಜ್ಯದ ಹಿಂದೂ ವಿರೋಧಿ ಸರಕಾರ, ಕ್ರಿಶ್ಚಿಯನ್ ಅಧಿಕಾರಿಯನ್ನು ನೇಮಕ ಮಾಡಿ ಕುಕ್ಕೆಯ ಪಾವಿತ್ರತೆ ಹಾಳು ಮಾಡುತ್ತಿದೆ ಎಂದು ಆರೋಪಿಸಿದ್ದಾನೆ. ಇದನ್ನೇ ನಂಬಿದ ಸಾವಿರಾರು ಜನ ಆ ಪೋಸ್ಟ್ ಅನ್ನು ರಿಟ್ವೀಟ್ ಮಾಡಿ, ವಾಟ್ಸಾಪ್ ಗಳಲ್ಲಿ ಶೇರ್ ಮಾಡುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ.
ವಾಟ್ಸಾಪ್ ಸಂದೇಶವನ್ನೇ ನಂಬಿದ ಕೆಲ ಬಿಜೆಪಿ ನಾಯಕರು ಕೂಡ, ಸರಕಾರದ ಮೇಲೆ ಇದೇ ಸರಿಯಾದ ಸಮಯ ಎಂದು ಮುಗಿಬಿದ್ದಿದ್ದಾರೆ. ರಾಜ್ಯ ಸರಕಾರ ಯಾವಾಗಲೂ ಹಿಂದೂ ವಿರೋಧಿ ನಿಲುವು ತಳೆಯುತ್ತದೆ. ಹಿಂದೂಗಳನ್ನು ನಾಶ ಮಾಡಲೇ ಕಾರ್ಯನಿರ್ವಹಿಸುತ್ತಿದೆ ಎಂದೆಲ್ಲ ಆರೋಪ ಮಾಡುವ ಮೂಲಕ ವಿವಾದವನ್ನು ದೊಡ್ಡದು ಮಾಡಿದ್ದಾರೆ.
ಈ ವಿವಾದ ಹೆಚ್ಚಾಗುತ್ತಿದ್ದಂತೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ವಿರೋಧಿಗಳಿಗೆ ಖಡಕ್ ಉತ್ತರ ಕೊಟ್ಟಿದ್ದು, ಯೇಸುರಾಜ್ ಹಿಂದೂ ಅಧಿಕಾರಿ. ಅದರಲ್ಲೂ ಅವರು ದಲಿತ ಅಧಿಕಾರಿ. ಇದನ್ನು ಸಹಿಸದ ಕೆಲವು ಕಿಡಿಗೇಡಿಗಳು, ಬಿಜೆಪಿ ನಾಯಕರು ವಿವಾದ ಸೃಷ್ಟಿಸಿದ್ದಾರೆ. ಆ ಮೂಲಕ ತಮ್ಮ ದಲಿತ ವಿರೋಧಿ ಮನಸ್ಥಿತಿಯನ್ನು ಬಿಜೆಪಿ ಬಹಿರಂಗ ಪಡಿಸಿದೆ ಎಂದು ಟಾಂಗ್ ನೀಡಿದ್ದಾರೆ.
ಈ ವೇಳೆ ರಾಮಲಿಂಗ ರೆಡ್ಡಿ ಅವರು, ಯೇಸುರಾಜ್ ಅವರ ವರ್ಗಾವಣೆ ಪತ್ರ, ಅವರ ಪುತ್ರನ ಜಾತಿಬಪ್ರಮಾಣ ಪತ್ರವನ್ನು ಲಗತ್ತಿಸಿ, ಅವರು ಕ್ರಿಶ್ಚಿಯನ್ ಅಲ್ಲ, ಹಿಂದೂ ಅಧಿಕಾರಿ ಎಂಬುದಕ್ಕೆ ದಾಖಲೆ ನೀಡಿದ್ದಾರೆ. ದಾಖಲೆ ಬಹಿರಂಗ ವಾಗುತ್ತಿದ್ದಂತೆ ಇಂತಹ ವಿವಾದ ಸೃಷ್ಟಿಗೆ ಕಾಯುತ್ತಿರುವ ಜನರ ಮೇಲೆ ನಡಟ್ಟಿಗರು ಮುಗಿಬಿದ್ದಿದ್ದಾರೆ. ದಲಿತರು ದೇವಸ್ಥಾನ ಪ್ರವೇಶ ಮಾಡಬಾರದು ಎಂಬ ಮನಸ್ಥಿತಿ ಇರುವ ಜನರಿಗೆ ದಲಿತರೆ ಅಧಿಕಾರಿಯಾಗಿ ನೇಮಕವಾದರೆ ಸಹಿಸಲು ಸಾಧ್ಯವೇ ಎಂದು ವ್ಯಂಗ್ಯವಾಡಿದ್ದಾರೆ.
ದಲಿತರು ಅಧಿಕಾರ ವಹಿಸಿಕೊಂಡರೆ, ಬಿಜೆಪಿ ಅಂತಹ ಪಕ್ಷಕ್ಕೆ ಸಹಿಸಿಕೊಳ್ಳುವುದು ಕಷ್ಟ. ಅದರಲ್ಲೂ ಕೆಲವು ಮನುವಾದಿ ಮನಸ್ಥಿತಿಗಳಿಗೆ ದಲಿತರ ಅಧಿಕಾರವನ್ನು ಸಹಿಕೊಳ್ಳಲು ಸಾಧ್ಯವಿಲ್ಲ, ಹೀಗಾಗಿ, ಯಾವುದೇ ವಿವಾದಕ್ಕೆ ಧರ್ಮದ ಬಣ್ಣ ಹಚ್ಚಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಅದೇ ಭಾಗವಾಗಿ, ದಲಿತ ಅಧಿಕಾರಿಯನ್ನು ಕ್ರಿಶ್ಚಿಯನ್ ಅಧಿಕಾರಿ ಎಂದು ಸುಳ್ಳು ಹರಡುವ ಮೂಲಕ ವಿವಾದ ಸೃಷ್ಟಿಸುವ ಕೆಲಸ ಮಾಡಿದೆ ಎಂದು ಅನೇಕರು ಕಿಡಿಕಾರಿದ್ದಾರೆ.
ಒಟ್ಟಾರೆ, ಬಿಜೆಪಿ ತಮ್ಮ ಧಾರ್ಮಿಕ ಭಾವನೆಗಳ ಜತೆಗೆ ಆಟವಾಡುವ ಮೂಲಕ ಜನರ ಭಾವನೆ ಕೆರಳಿಸುವ ಕೆಲಸ ಮಾಡುತ್ತದೆ. ಆ ಮೂಲಕ ದಲಿತರನ್ನು, ಅಲ್ಪಸಂಖ್ಯಾತರ ನ್ನು ದ್ವೇಷಿಸುವ ಕೆಲಸ ಮಾಡುತ್ತಿದೆ. ಇದು ಅನೇಕ ವಿವಾದಗಳಿಗೆ ಕಾರಣವಾಗುತ್ತಿದ್ದು, ಇದು ಅಪಾಯಕಾರಿ ಎಂದು ಅನೇಕರು ಮೂದಲಿಸಿದ್ದಾರೆ.