ಕೋಟ್ಯಂತರ ರು.ಬೆಲೆಯ ಮೆಕ್ಕೆಜೋಳ ಬೆಂಕಿಗಾಹುತಿ: ರೈತರು ಕಂಗಾಲು
ಹಾವೇರಿ: ರೈತರು ತಾವು ಬೆಳೆದ ಕೋಟ್ಯಂತರ ರು.ಮೌಲ್ಯದ ಮೆಕ್ಕೆಜೋಳ ಬೆಂಕಿಗೆ ಆಹುತಿಯಾಗುವುದನ್ನು ಕಂಡು ಮುಮ್ಮಲ ಮರುಗುತ್ತಿದ್ದಾರೆ.
ಹಾವೇರಿ ಜಿಲ್ಲೆಯ ಹುರುಳಿಕುಪ್ಪೆ ಮತ್ತು ಕುರುಬಮುಲ್ಲೂರು ಗ್ರಾಮದ ಸುಮಾರು ೬೬ ರೈತರು ಒಂದು ಕಡೆ ಮೆಕ್ಕೆಜೋಳವನ್ನು ಸಂಗ್ರಹಿಸಿದ್ದರು. ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಎಲ್ಲ ಮೆಕ್ಕೆಜೋಳವು ಕೂಡ ಹೊತ್ತಿ ಉರಿಯುತ್ತಿದೆ.
ಬೆಂಕಿ ನಂದಿಸಲು ಅಗ್ನಿಶಾಮಕ ವಾಹನಗಳು ಸ್ಥಳಕ್ಕಾಗಮಿಸಿದ್ದು, ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದರಲ್ಲಿ ಸುಮಾರು ಸವಣೂರು ೬೬ ರೈತರು ಬೆಳೆದ ಲಕ್ಷಾಂತರ ಟನ್ ಮೆಕ್ಕೆಜೋಳ ಸಂಗ್ರಹವಾಗಿತ್ತು ಎನ್ನಲಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯ ಮಹಂತೇಶ್ ದಾನಮ್ಮನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತರಿಗೆ ಸಾಂತ್ವನ ಹೇಳಿರುವ ಜಿಲ್ಲಾಧಿಕಾರಿಗಳು ಸರಕಾರದಿಂದ ಸೂಕ್ತ ನೆರವು ನೀಡುವ ಭರವಸೆ ನೀಡಿದ್ದಾರೆ. ಸವಣೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


