ಬೆಂಗಳೂರು: ವಿಜಯ್ ಹರಾರೆ ಟ್ರೋಪಿಯಲ್ಲಿನ ಅದ್ಭುತ ಪ್ರದರ್ಶನದ ನಂತರ ಕರ್ನಾಟಕದ ಎಡಗೈ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ಕರ್ನಾಟಕದ ಕ್ಯಾಫ್ಟನ್ ಆಗಿ ಘೋಷಿಸಲಾಗಿದೆ.
ಮಯಾಂಕ್ ಅಗರ್ವಾಲ್ ನೇತೃತ್ವದಲ್ಲಿ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್ ತಲುಪಿತ್ತು. ಆದರೆ, ನಾಕೌಟ್ ಹಂತದಲ್ಲಿ ಪ್ರದರ್ಶನ ನೀಡಿ ಪ್ರಶಸ್ತಿ ಸುತ್ತಿಗೆ ತೆರಳಲು ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಮಯಾಂಕ್ ಜಾಗಕ್ಕೆ ಪಡಿಕ್ಕಲ್ ಅವರನ್ನು ತರಲಾಗಿದೆ.
ಮಯಾಂಕ್ ಅಗರ್ವಾಲ್ ಮುಂದೆ ಆಟಗಾರನಾಗಿದ್ದುಕೊಂಡು, ಕಿರಿಯ ಆಟಗಾರರಿಗೆ ಮಾಗದರ್ಶನ ಮಾಡಲಿದ್ದಾರೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಅಮಿತ್ ವರ್ಮಾ ತಿಳಿಸಿದ್ದಾರೆ. ಪ್ರಸ್ತುತ ಮುಂದಿನ ಪಂದ್ಯಗಳಿಗೆ ಕೆ.ಎಲ್.ರಾಹುಲ್ ಮತ್ತು ಪ್ರಸಿದ್ಧ್ ಕೃಷ್ಣ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆ.

