ಭಾರತದ ಮಾಜಿ ಕ್ರಿಕೆಟಿಗ ಮತ್ತು ಟೀಮ್ ಇಂಡಿಯಾದ ಕೋಚ್ ಆಗಿ ಸೇವೆ ಸಲ್ಲಿಸಿದ್ದ ಅಂಶುಮನ್ ಗಾಯಕ್ವಡ್ ತಮ್ಮ 71ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಗಾಯಕ್ವಡ್ ಕೆಲವು ವರ್ಷಗಳಿಂದ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಇಂಗ್ಲೆಂಡ್ ನ ಲಂಡನ್ ಕಿಂಗ್ಸ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಕೆಲವು ದಿನಗಳ ಹಿಂದೆಯಷ್ಟೇ ಭಾರತಕ್ಕೆ ಗಾಯಕ್ವಡ್ ಮರಳಿದ್ದರು. ಆದರೆ ಜುಲೈ 31 ರಂದು ಇಹಲೋಕ ತ್ಯಜಿಸಿದ್ದಾರೆ. ಈ ವಿಷಯ ಭಾರತದ ಕ್ರಿಕೆಟ್ ಲೋಕಕ್ಕೆ ಮತ್ತು ಅಭಿಮಾನಿಗಳಿಗೆ ವಿಷಾದಕರ ವಿಷಯವಾಗಿದೆ. ಅಂಶುಮನ್ ಗಾಯಕ್ವಡ್ 1997 ರಿಂದ 2000 ರವರೆಗೆ ಭಾರತ ಕ್ರಿಕೆಟ್ ತಂಡದ ಕೋಚ್ ಆಗಿಯೂ ಸಹ ಕಾರ್ಯನಿರ್ವಾಹಿಸಿದ್ದಾರೆ.
ಗಾಯಕ್ವಡ್ ಅವರು ಭಾರತೀಯ ಕ್ರಿಕೆಟ್ ತಂಡಕ್ಕೆ ನೀಡಿದ ಕೊಡುಗೆಯನ್ನು ನೋಡುವದಾದರೆ ಇವರು ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲಿ 55 ಅಂತರಾಷ್ಟ್ರೀಯ ಏಕದಿನ ಪಂದ್ಯಗಳು ಮತ್ತು ಬರೋಡದ ಪರ ಬರೋಬ್ಬರಿ 250 ಡೋಮೆಸ್ಟಿಕ್ ಪಂದ್ಯಗಳನ್ನು ಆಡುವ ಮೂಲಕ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.
ಮತ್ತು 1982- 83 ರಲ್ಲಿ ಪಾಕಿಸ್ತಾನದ ವಿರುದ್ಧ ನೆಡೆದ ಟೆಸ್ಟ್ ಪಂದ್ಯವೊಂದರಲ್ಲಿ ಬರೋಬ್ಬರಿ 201 ರನ್ ಗಳ ದ್ವಿಶತಕ ಬಾರಿಸುವುದರ ದಾಖಲೆ ಸೃಷ್ಟಿಸಿದ್ದರು.
ಗಾಯಕ್ವಡ್ ರವರು ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಂಹ ಸಂದರ್ಭದಲ್ಲಿ ಭಾರತದ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಗಾಯಕ್ವಡ್ ರವರ ಚಿಕಿತ್ಸೆಗೆ ಬಿಸಿಸಿಐ ಸಹಾಯ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದರು. ಇವರು ಇಹಲೋಕ ತ್ಯಜಿಸಿದ ವಿಷಯವನ್ನು ತಿಳಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ.