ಬೆಂಗಳೂರು: ಕೋಗಿಲು ಕ್ರಾಸ್‌ನ ಅಕ್ರಮ ಮನೆಗಳ ತೆರವು ಪ್ರಕರಣದಲ್ಲಿ ಅನರ್ಹರಿಗೆ ಮನೆ ಕೊಡುವ ಸರಕಾರದ ತೀರ್ಮಾನ ವಿರೋಧಿಸಿ, ಜ.5 ರಂದು ಬೃಹತ್ ಪ್ರತಿಭಟನೆ ನಡೆಸಲು ಬಿಜೆಪಿ ತೀರ್ಮಾನಿಸಿದೆ.
ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದ ಸತ್ಯಶೋಧನಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಏಕಾಏಕಿ ಮನೆ ಕೊಡಲು ಸರಕಾರ ತೀರ್ಮಾನಿಸಿದೆ. ಇದು ಸಾಧ್ಯವಿಲ್ಲ. ಒಂದು ವೇಳೆ ಮನೆ ಕೊಟ್ಟರೆ ನಾನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡ್ತೇವೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.
ಕೇರಳ ಸರಕಾರದ ಒತ್ತಾಯಕ್ಕೆ ಮಣಿದು, ಕೇರಳ ಕಾಂಗ್ರೆಸ್ ನಾಯಕರ ಅಣತಿಯ ಮೇರೆಗೆ ಸಂತ್ರಸ್ತರಿಗೆ ಮನೆ ನೀಡಲು ಸರಕಾರ ಮುಂದಾಗಿದೆ. ಅದೇ ರೀತಿ ಅನೇಕ ಸಂತ್ರಸ್ತರಿಗೆ ಮನೆ ಕೊಡಲು ವರ್ಷಗಳಿಂದ ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಮಾತ್ರ ಆತುರ ತೋರುವ ಸರಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ.

