ಬೆಂಗಳೂರು: ಬೆಂಗಳೂರಿನಲ್ಲಿ ಸೈಬರ್ ಖದೀಮರ ಹಾವಳಿ ಅತ್ಯಂತ ಹೆಚ್ಚಾಗಿದ್ದು, ನಿತ್ಯ ಸರಾಸರಿ 4.83 ಕೋಟಿ ರೂ. ಹಣವು ಸದ್ದಿಲ್ಲದೇ ಸೈಬರ್ ಖದೀಮರ ಪಾಲಾಗುತ್ತಿದೆ.
ಪೊಲೀಸ್ ಇಲಾಖೆ ಅಂಕಿ-ಅAಶಗಳ ಪ್ರಕಾರ 2025 ರ ನವೆಂಬರ್ ಅಂತ್ಯದ ವೇಳೆಗೆ ಬೆಂಗಳೂರಿನಲ್ಲಿ ಬರೋಬ್ಬರಿ 1,543.41 ಕೋಟಿ ರೂ.ಗಳನ್ನು ಸೈಬರ್ ವಂಚಕರು ದೋಚಿದ್ದಾರೆ. ರಾಜ್ಯದಲ್ಲಿ ಸೈಬರ್ ಖದೀಮರು ವಂಚಿಸಿದ ಹಣದಲ್ಲಿ ಬೆಂಗಳೂರು ಸಿಂಹಪಾಲು ಅಂದರೆ ಅಂದಾಜು 75.69% ಹೊಂದಿದೆ.
ಸೈಬರ್ ವಂಚನೆಗೆ ಒಳಗಾಗದಂತೆ ಸಾರ್ವಜನಿಕರಿಗೆ ಅದೆಷ್ಟೇ ಮಾಹಿತಿ ನೀಡಿದ್ದರೂ, ವಂಚಕರು ವಿವಿಧ ಜಾಲಗಳಲ್ಲಿ ಸಾರ್ವಜನಿಕರನ್ನು ವಂಚನೆ ಮಾಡುತ್ತಿದ್ದಾರೆ. ಡಿಜಿಟಲ್ ಅರೆಸ್ಟ್, ವಿವಿಧ ವಸ್ತುಗಳ ಮೇಲಿನ ಆಫರ್, ಹೆಚ್ಚಿನ ಲಾಭ ಕೊಡುವ ಭರವಸೆ ನೀಡುವ ಮೂಲಕ ಜನರನ್ನು ಬಲೆಗೆ ಬೀಳಿಸಿಕೊಳ್ಳುತ್ತಿದ್ದಾರೆ.

