ಕ್ರೀಡೆ ಸುದ್ದಿ

ಬಾಂಗ್ಲಾದೇಶದ ದಳ್ಳುರಿ: ಕ್ರಿಕೆಟಿಗ ಮೋರ್ತಜಾ ಮನೆಗೆ ಬೆಂಕಿ

Share It

ಢಾಕಾ: ಅರಾಜಕತೆಯಿಂದ ಬಾಂಗ್ಲಾದೇಶದಲ್ಲಿ ಗಲಭೆ ಹೆಚ್ಚಾಗಿದ್ದು, ಕ್ರಿಕೆಟಿಗ ಹಾಗೂ ಸಂಸದ ಮುಶ್ರಫೆ ಮೊರ್ತಜಾ ಅವರ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ಶೇಖ್ ಹಸೀನಾ ರಾಜೀನಾಮೆಯಿಂದ ದೇಶದಲ್ಲಿ ಅರಾಜಕತೆ ಉಂಟಾಗಿದ್ದು, ಪ್ರಧಾನಿ ನಿವಾಸ ಸೇರಿದಂತೆ ಎಲ್ಲಂದರಲ್ಲಿ ಪ್ರತಿಭಟನಾಕಾರರು ಬೆಂಕಿ ಹೊತ್ತಿಸಿ ಪರಾರಿಯಾಗುತ್ತಿದ್ದಾರೆ. ಈ ನಡುವೆ ಕ್ರಿಕೆಟ್ ಆಟಗಾರ ಮುಶ್ರಫೆ ಮೊರ್ತಜಾ ಮನೆ ಮೇಲೆ ದಾಳಿ ನಡೆಸಿದ್ದಾರೆ.

ನೂರಾರು ಜನರ ಗುಂಪು ಮೊರ್ತಜಾ ಮನೆಯ ಮೇಲೆ ದಾಳಿ ನಡೆಸಿ ಬೆಂಕಿಯಿಟ್ಟು ಪರಾರಿಯಾಗಿದ್ದಾರೆ. ಘಟನೆಯಿಂದ ಇಡೀ ಮನೆಗೆ ಬೆಂಕಿಯ ಕೆನ್ನಾಲಗೆ ಆವರಿಸಿದೆ. ಸಿಕ್ಕಸಿಕ್ಕಲ್ಲಿ ಇದೇ ರೀತಿ ಹಿಂಸಾಚಾರ ಕೃತ್ಯಗಳನ್ನು ಎಸಗುತ್ತಿರುವ ಪ್ರತಿಭಟನಾಕಾರರ ಆರ್ಭಟಕ್ಕೆ ಈವರೆಗೆ ೧೫೬ ಜನ ಸಾವಿಗೀಡಾಗಿದ್ದಾರೆ.


Share It

You cannot copy content of this page