ಸುದ್ದಿ

ಅತ್ಯುತ್ತಮ ನಟ ಸೇರಿ 8 ವಿಭಾಗಗಳಲ್ಲಿ ದರ್ಶನ್ ಅಭಿನಯದ ‘ಕಾಟೇರಾ’ ಚಿತ್ರ ನಾಮ ನಿರ್ದೇಶನ!

Share It

ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವೀ ಅವಾರ್ಡ್ಸ್ (SIIMA) 12ನೇ ಆವೃತ್ತಿ ಇದೇ ಸೆಪ್ಟೆಂಬರ್ ನಲ್ಲಿ ನಡೆಯಲಿದೆ. SIIMA ಉತ್ಸವಗಳು ದಕ್ಷಿಣ ಭಾರತದ ಚಲನಚಿತ್ರಗಳನ್ನು ಕೇಂದ್ರೀಕರಿಸುತ್ತದೆ. ಅಂತರರಾಷ್ಟ್ರೀಯವಾಗಿ ದಕ್ಷಿಣ ಭಾರತದ ಚಲನಚಿತ್ರ ಅಭಿಮಾನಿಗಳು ಮತ್ತು ದಕ್ಷಿಣ ಭಾರತದ ಚಲನಚಿತ್ರ ತಾರೆಯರನ್ನು ಒಟ್ಟುಗೂಡಿಸುತ್ತವೆ. ಏತನ್ಮಧ್ಯೆ, ಇತ್ತೀಚಿನ ವರದಿಯ ಪ್ರಕಾರ, ಕಳೆದ ವರ್ಷ ಬಿಡುಗಡೆಯಾದ ದರ್ಶನ್ ಅಭಿನಯದ ಕಾಟೇರಾ, SIIMA 2024ರಲ್ಲಿ ಎಂಟು ನಾಮನಿರ್ದೇಶನಗಳನ್ನು ಸ್ವೀಕರಿಸಿದೆ.

ಮೂಲಗಳ ಪ್ರಕಾರ, ದರ್ಶನ್ ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ಈ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ನಟಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಕೂಡ ಅತ್ಯುತ್ತಮ ಚೊಚ್ಚಲ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ಅತ್ಯುತ್ತಮ ಕಥಾವಸ್ತುವಿಗೆ, ಕಾಟೇರಾ ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದು, ನಿರ್ದೇಶಕ ತರುಣ್ ಸುಧೀರ್ ಅತ್ಯುತ್ತಮ ನಿರ್ದೇಶಕರ ಪಟ್ಟಿಯಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ಕಾಟೇರದಲ್ಲಿ ವಿ. ಹರಿಕೃಷ್ಣ ಅವರ ಸಂಗೀತವೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದು ಅತ್ಯುತ್ತಮ ಸಂಗೀತ ನಿರ್ದೇಶಕ ಮತ್ತು ಅತ್ಯುತ್ತಮ ಹಿನ್ನೆಲೆ ಗಾಯಕ ಮತ್ತು ಗಾಯಕಿ ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದ್ದಾರೆ.

ಜುಲೈ 12ಕ್ಕೆ ದರ್ಶನ್​ ನಟನೆಯ ‘ಶಾಸ್ತ್ರಿ’ ಸಿನಿಮಾ ರೀ-ರಿಲೀಸ್!
ಕನ್ನಡ ನಾಮನಿರ್ದೇಶನಗಳ ಪಟ್ಟಿ

ಅತ್ಯುತ್ತಮ ಚಿತ್ರ ವಿಭಾಗದಲ್ಲಿ: ಡೇರ್‌ಡೆವಿಲ್ ಮುಸ್ತಫಾ, ಕಾಟೇರಾ, ಕೌಸಲ್ಯ ಸುಪ್ರಜಾ ರಾಮ, ಸಪ್ತ ಸಾಗರದಾಚೆ ಎಲ್ಲೋ, ಸ್ವಾತಿ ಮುತ್ತಿನ ಮಳೆ ಹನಿಯೇ.

ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ: ಹೇಮಂತ್ ಎಂ ರಾವ್ (ಸಪ್ತ ಸಾಗರದಾಚೆ ಎಲ್ಲೋ, ಮನ್ಸೋರ್ (19.20.21), ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ), ರಾಜ್ ಬಿ. ಶೆಟ್ಟಿ (ಸ್ವಾತಿ ಮುತ್ತಿನ ಮಳೆ ಹನಿಯೇ), ಶಶಾಂಕ್ ಸೋಗಲ್ (ಡೇರ್‌ಡೆವಿಲ್ ಮುಸ್ತಫಾ), ತರುಣ್ ಸುಧೀರ್ (ಕಾಟೇರಾ)

ಅತ್ಯುತ್ತಮ ನಟ ವಿಭಾಗದಲ್ಲಿ: ದರ್ಶನ್ (ಕಾಟೇರಾ, ನಾಗಭೂಷಣ (ಟಗರುಪಲ್ಯ), ರಾಜ್ ಬಿ. ಶೆಟ್ಟಿ (ಸ್ವಾತಿ ಮುತ್ತಿನ ಮಳೆ ಹನಿಯೇ), ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೋ), ಶಿಶಿರ್ ಬೈಕಾಡಿ (ಡೇರ್‌ಡೆವಿಲ್ ಮುಸ್ತಫಾ), ಶಿವರಾಜ್‌ಕುಮಾರ್ (ಘೋಸ್ಟ್‌).

ಅತ್ಯುತ್ತಮ ನಟಿ ವಿಭಾಗದಲ್ಲಿ: ಅಕ್ಷತಾ ಪಾಂಡವಪುರ (ಪಿಂಕಿ ಎಲ್ಲಿ), ಅಮೃತ ಪ್ರೇಮ್ (ಟಗರುಪಲ್ಯ), ಮಿಲನಾ ನಾಗರಾಜ್ (ಕೌಸಲ್ಯ ಸುಪ್ರಜಾ ರಾಮ), ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೋ), ಸಿಂಧು ಶ್ರೀನಿವಾಸಮೂರ್ತಿ (ಆಚಾರ್ & ಕೋ.), ಸಿರಿ ರವಿಕುಮಾರ್ (ಸ್ವಾತಿ ಮುತ್ತಿನ ಮಳೆ ಹನಿಯೇ).

ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ: ನಾಗಭೂಷಣ (ಕೌಸಲ್ಯ ಸುಪ್ರಜಾ ರಾಮ), ಪೂರ್ಣಚಂದ್ರ (ಡೇರ್‌ಡೆವಿಲ್ ಮುಸ್ತಫಾ), ರಾಜೇಶ್ ನಟರಂಗ (19.20.21), ರಮೇಶ್ ಇಂದಿರಾ (ಸಪ್ತ ಸಾಗರದಾಚೆ ಎಲ್ಲೋ), ರಂಗಾಯಣ ರಘು (ಟಗರುಪಲ್ಯ).

ಅತ್ಯುತ್ತಮ ಪೋಷಕ ನಟಿ ವಿಭಾಗದಲ್ಲಿ: ಗುಂಜಾಲಮ್ಮ (ಪಿಂಕಿ ಎಲ್ಲಿ), ಎಂ.ಡಿ.ಪಲ್ಲವಿ (19.20.21), ಶ್ರುತಿ (ಕಾಟೇರಾ), ಸುಧಾ ಬೆಳವಾಡಿ (ಕೌಸಲ್ಯ ಸುಪ್ರಜಾ ರಾಮ), ತಾರಾ (ಟಗರುಪಲ್ಯ).

ಅತ್ಯುತ್ತಮ ಚಿತ್ರ ಸಂಗೀತ ವಿಭಾಗದಲ್ಲಿ: ಕಾಟೇರ (ವಿ. ಹರಿಕೃಷ್ಣ), ಕೌಸಲ್ಯ ಸುಪ್ರಜಾ ರಾಮ (ಅರ್ಜುನ್ ಜನ್ಯ), ಸಪ್ತ ಸಾಗರದಾಚೆ ಎಲ್ಲೋ (ಚರಣ್ ರಾಜ್), ಸ್ವಾತಿ ಮುತ್ತಿನ ಮಳೆ ಹನಿಯೇ (ಮಿಧುನ್ ಮುಕುಂದನ್), ಟಗರುಪಲ್ಯ (ವಾಸುಕಿ ವೈಭವ್).

ಅತ್ಯುತ್ತಮ ಸಾಹಿತ್ಯ ವಿಭಾಗದಲ್ಲಿ: ಬಿ.ಆರ್. ಲಕ್ಷ್ಮಣ್ ರಾವ್ (ಯಾವ ಚುಂಬಕ-ಚೌಕಾಬಾರಾ), ಡಾಲಿ ಧನಂಜಯ (ಸಂಬಂಜ ಅನ್ನೋದು ದೊಡ್ದು ಕನಾ- ಟಗರುಪಲ್ಯ), ಧನಂಜಯ್ ರಂಜನ್ (ನದಿಯೇ ಓ ನದಿಯೇ- ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ), ಜಯಂತ್ ಕಾಯ್ಕಿಣಿ (ಪ್ರೀತಿಸುವೆ- ಕೌಸಲ್ಯ ಸುಪ್ರಜಾ ರಾಮ), ಪೃಥ್ವಿ (ಮೆಲ್ಲಗೆ- ಸ್ವಾತಿ ಮುತ್ತಿನ ಮಳೆ ಹನಿಯೇ)

ಅತ್ಯುತ್ತಮ ಹಿನ್ನೆಲೆ ಗಾಯಕ ವಿಭಾಗದಲ್ಲಿ: ಕಪಿಲ್ ಕಪಿಲನ್ (ನದಿಯೇ ಓ ನದಿಯೇ- ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ), ರವೀಂದ್ರ ಸೊರಗಾವಿ (ನೋಡಲಾಗದೆ ದೇವ- ವಿರಾಟಪುರ ವೀರಾಗಿ), ಸೋನು ನಿಗಮ್ (ಬೊಂಬೆ ಬೊಂಬೆ-ಕ್ರಾಂತಿ), ವಾಸುಕಿ ವೈಭವ್ (ನೊಂದ್ಕೊಬ್ಯಾಡ್ವೆ-ಟಗರುಪಲ್ಯ), ವಿಜಯ್ ಪ್ರಕಾಶ್ (ಪುಣ್ಯಾತ್ಮ- ಕಾಟೇರ)

ಅತ್ಯುತ್ತಮ ಹಿನ್ನೆಲೆ ಗಾಯಕಿ ವಿಭಾಗದಲ್ಲಿ: ಮಾಧುರಿ ಶೇಷಾದ್ರಿ (ಮೆಲ್ಲಗೆ- ಸ್ವಾತಿ ಮುತ್ತಿನ ಮಳೆ ಹನಿಯೇ), ಮಂಗ್ಲಿ (ಪಸಂದಾಗವ್ನೆ- ಕಾಟೇರಾ), ಪೃಥ್ವಿ ಭಟ್ (ಪ್ರೀತಿಸುವೆ- ಕೌಸಲ್ಯ ಸುಪ್ರಜಾ ರಾಮ), ಸಂಗೀತಾ ಕಟ್ಟಿ (ಕಾಯೋ ಶಿವ ಕಾಪಾಡೋ ಶಿವ- ಪೆಂಟಗನ್), ಶ್ರೀಲಕ್ಷ್ಮಿ ಬೆಳ್ಮಣ್ಣು (ಕಡಲನು ಕಾಣ ಹೊರಟಿರೋ- ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ)


Share It

You cannot copy content of this page