ಬೆಂಗಳೂರು:ರೇಣುಕಾ ಸ್ವಾಮಿ ಕೊಲೆ ಕೇಸಲ್ಲಿ ಸೆಂಟ್ರಲ್ ಜೈಲು ಸೇರಿರೋ ಡಿ ಬಾಸ್ ದರ್ಶನ್ ಗೆ ಜೈಲೂಟ ಸಾಕುಸಾಕೆನಿಸಿದೆಯಂತೆ. ಹೀಗಾಗಿ, ಮನೆ ಊಟಕ್ಕೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಜೈಲು ಸೇರುವ ಮೊದಲು ನಟ ದರ್ಶನ್ ರದ್ದು ಬಿಂದಾಸ್ ಸ್ಟೈಲ್. ಮನೆ, ಸಂಸಾರ ಎಲ್ಲವೂ ಇದ್ದರೂ ಯಾವಾಗಲೂ ಪಬ್, ಬಾರ್, ರೆಸ್ಟೋರೆಂಟ್ ಗಳಲ್ಲೇ ಹೆಚ್ಚಾಗಿ ದರ್ಶನ್ ಕಳೆಯುತ್ತಿದ್ದರು. ಪ್ರತಿದಿನ ಪಾರ್ಟಿಯಿಲ್ಲದೆ ಮನೆಗೆ ಬರುತ್ತಿರಲಿಲ್ಲ. ಅಲ್ಲಿ ಚಿಕನ್, ಮಟನ್ ಸೇರಿ ಅವರಿಷ್ಟದ ಊಟ ತಿನ್ನೋದು ದರ್ಶನದ ಪ್ಯಾಶನ್ ಕೂಡ ಆಗಿತ್ತು.
ಆದರೆ, ರೇಣುಕಾ ಸ್ವಾಮಿ ಕೊಲೆ ಕೇಸಲ್ಲಿ ತಗಲಾಕೊಂಡು “ಜೈಲೂಟ ಗ್ಯಾರಂಟಿ” ಅನ್ನೋ ರೀತಿಯಾಗಿದೆ ಅವರ ಬದುಕು. ಈಗಾಗಲೇ ಒಂದು ತಿಂಗಳಿಂದ ಅವರಿಗೆ ಜೈಲೂಟವೇ ಗತಿ. ಹೀಗಾಗಿ, ಮನೆ ಊಟ ಮಾಡಲು ಅನುಮತಿ ನೀಡುವಂತೆ ಜೈಲಧಿಕಾರಿಗಳ ಮುಂದೆ ದರ್ಶನ್ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ದರ್ಶನ್ ಜೈಲು ಸೇರಿದ ನಂತರ ಬಹಳ ವೀಕ್ ಆಗುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದಕ್ಕೆ ಜೈಲಿನ ಊಟ ಸರಿಯಾಗಿ ಹೊಂದಿಕೆಯಾಗದಿರುವುದು ಮತ್ತು ನಿದ್ರೆಯಿಲ್ಲದಡ ಕಳೆಯುತ್ತಿರುವ ರಾತ್ರಿಗಳು ಕಾರಣ ಎನ್ನಲಾಗುತ್ತಿದೆ. ಸುಮಾರು ಹತ್ತು ಕೆಜಿ ಕಡಿಮೆಯಾಗಿದ್ದು, ಫುಡ್ ಪಾಯ್ಸನ್ ಆಗುತ್ತಿದೆ ಡಂಬ ಕಾರಣ ನೀಡಿ, ಮನೆಯೂಟಕ್ಕೆ ಮನವಿ ಮಾಡಿದ್ದಾರೆ.
ಆದರೆ, ಗೃಹಸಚಿವ ಡಾ. ಜಿ. ಪರಮೇಶ್ವರ ಅವರು, ದರ್ಶನ್ ಗೆ ಜೈಲಿನಲ್ಲಿ ಯಾವುದೇ ರೀತಿಯ ವಿಶೇಷ ಸೌಲಭ್ಯ ಕಲ್ಪಿಸಿಲ್ಲ. ಕಲ್ಪಿಸುವುದೂ ಇಲ್ಲ. ನಿಯಮದ ಪ್ರಕಾರ ಎಲ್ಲ ಖೈದಿಗಳಿಗೂ ಕೊಡುವ ಊಟವನ್ನು ಕೊಡಲಾಗುತ್ತಿದೆ. ಅದೇ ಮುಂದುವರಿಯಲಿದೆ.
ನ್ಯಾಯಾಲಯ ಏನಾದರೂ ವಿಶೇಷ ಸೂಚನೆ ನೀಡಿದರೆ, ಅಧಿಕಾರಿಗಳು ಅದನ್ನು ಪಾಲಿಸುತ್ತಾರೆ ಎನ್ನುವ ಮೂಲಕ ದರ್ಶನ್ ಮನೆಯೂಟ ಗಿಟ್ಟಿಸಿಕೊಳ್ಳುವುದು ಕೂಡ ಅಷ್ಟೊಂದು ಸುಲಭವಲ್ಲ ಎಂಬ ಮುನ್ಸೂಚನೆ ನೀಡಿದ್ದಾರೆ.