ಅಪರಾಧ ಸಿನಿಮಾ ಸುದ್ದಿ

ದರ್ಶನ್ ಮತ್ತೆರಡು ದಿನ ಪೊಲೀಸ್ ವಶಕ್ಕೆ

Share It

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಅವರನ್ನು ನ್ಯಾಯಾಲಯ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಗುರುವಾರಕ್ಕೆ ಪೊಲೀಸ್ ಕಸ್ಟಡಿ ಅವಧಿ ಮುಗಿದ ಕಾರಣಕ್ಕೆ ಪೊಲೀಸರು ನ್ಯಾಯಾಲಯದ ಮುಂದೆ ಆರೋಪಿಗಳನ್ನು ಹಾಜರುಪಡಿಸಿದ್ದರು. ನ್ಯಾಯಾಲಯ ದರ್ಶನ್ ಸೇರಿ ಆರು ಜನರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದರೆ, ಉಳಿದ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಹೀಗಾಗಿ, ಎ-1 ಪವಿತ್ರಾ ಗೌಡ ಸೇರಿ ಎಂಟು ಜನರು ಪರಪ್ಪನ ಅಗ್ರಹಾರ ಜೈಲು ಸೇರಿದ್ದರೆ, ದರ್ಶನ್ ಸೇರಿ, ಉಳಿದ ಆರೋಪಿಗಳು ಮತ್ತೆರೆಡು ದಿನ ಪೊಲೀಸ್ ಕಸ್ಟಡಿಗೆ ಸೇರಿದ್ದಾರೆ.

ಹೆಚ್ಚಿನ ವಿಚಾರಣೆ ಅವಶ್ಯಕತೆ ಇದೆ ಎಂದು ಪೊಲೀಸರು ದರ್ಶನ್ ಮತ್ತು ನಾಲ್ವರು ಜನರನ್ನು ಕಸ್ಟಡಿಗೆ ಪಡೆದಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದು, ಕೆಲ ವಿಚಾರಣೆಗಳು ಬಾಕಿಯಿದ್ದು, ಎರಡು ದಿನ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸಲಿದ್ದಾರೆ.


Share It

You cannot copy content of this page