ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ದರ್ಶನ್ ಅವರ ಪರ ಅವರ ಅಭಿಮಾನಿಗಳು ಪ್ರಚೋದನಕಾರಿಯಾಗಿ ಮಾತನ್ನಾಡುತ್ತಿದ್ದು, ನಿರ್ಮಾಪಕ ಉಮಾಪತಿ ಅವರಿಗೆ ಬೆದರಿಕೆ ಹಾಕಿದ್ದ ಚೇತನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಥಮ್ ಮತ್ತು ಉಮಾಪತಿ ಗೌಡ ವಿರುದ್ಧ ಬೆದರಿಕೆಯ ಮಾತುಗಳನ್ನಾಡುವ ಮೂಲಕ ಇಬ್ಬರಿಗೂ ಬೆದರಿಕೆ ಹಾಕಿದ್ದ. ಆತನ ವಿರುದ್ಧ ಬಸವೇಶ್ವರ ನಗರ ಪೊಲೀಸರು, ಚೇತನ್ ನನ್ನು ಬಂಧನ ಮಾಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ನಂತರ ಆತನ ಕ್ಷಮಾಪಣೆ ಕೇಳಿ ವಿಡಿಯೋ ಬಿಡುಗಡೆ ಮಾಡಿದ್ದಾನೆ.
ದರ್ಶನ್ ಬಂಧಸಿ, ನ್ಯಾಯಾಲಯ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುತ್ತಿದ್ದಂತೆ ರೊಚ್ಚಿಗೆದ್ದಿದ್ದ ಚೇತನ್ ಉಮಾಪತಿ ನಮ್ ಬಾಸ್ ಬಗ್ಗೆ ಬಾಯಿಗೆ ಬಂದAತೆ ಮಾತನ್ನಾಡುತ್ತಿದ್ದಾನೆ. ಆತನಿಗೆ ಬುದ್ದಿ ಕಲಿಸುತ್ತೇವೆ. ಪ್ರಥಮ್ ಕೂಡ ಗಾಂಚಾಲಿ ಆಡುತ್ತಿದ್ದಾನೆ. ಅವನಿಗೂ ಕಾದಿದೆ ಎಂದು ಅವರಿಬ್ಬರಿಗೂ ಬೆದರಿಕೆಯೊಡ್ಡಿದ್ದ. ಜತೆಗೆ ‘ಡಿ’ ಬಾಸ್ ಅಭಿಮಾನಿಗಳನ್ನು ಈ ಇಬ್ಬರ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ನಡೆಸುತ್ತಿದ್ದ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಬಸವೇಶ್ವರನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆತನನ್ನು ವಶಕ್ಕೆ ಪಡೆದಿದ್ದಾರೆ. ಆ ವೇಳೆ ಪೊಲೀಸರ ಮುಂದೆ ಆತ ಈ ಇಬ್ಬರ ವಿರುದ್ಧ ಮಾತನ್ನಾಡಿದ್ದು ತಪ್ಪಾಯಿತು ಎಂದು ಕ್ಷಮೆ ಕೋರಿದ್ದಾನೆ. ಆತನ ಬಂಧನದ ಮೂಲಕ ಅಭಿಮಾನದ ಹೆಸರಲ್ಲಿ ಅತಿರೇಕದ ನಡವಳಿಕೆ ತೋರುತ್ತಿರುವ ಅಭಿಮಾನಿಗಳಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

