ಚಿತ್ರದುರ್ಗ: ಇಲ್ಲಿನ ಸ್ಥಳೀಯ ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಅನಾಮಧೇಯನೊಬ್ಬ ಫೋನ್ ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಈ ಬಗ್ಗೆ ಸ್ವತಃ ತಿಪ್ಪಾರೆಡ್ಡಿ ಅವರೇ ಪತ್ರಕರ್ತರ ಬಳಿ ಹೀಗೆ ಹೇಳಿಕೊಂಡಿದ್ದಾರೆ:
“ನಾನು ನಮ್ಮ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ಅವರ ವಿರುದ್ಧ ಬಿಜೆಪಿ ಪಕ್ಷದ ವತಿಯಿಂದ ಪ್ರತಿಭಟನೆಯ ನೇತೃತ್ವ ವಹಿಸಿದ್ದೆ. ಆಗ ಈ ಪ್ರತಿಭಟನೆಗೆ ಹೋಗುವಷ್ಟರಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ ನನಗೆ ಕರೆ ಮಾಡಿ ನೀವು ನಟ ದರ್ಶನ್ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಬೇಡಿ ಎಂದು ಬೆದರಿಕೆ ಹಾಕಿದೆ. ನಾನು ನನ್ನ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಮಾಡಿಸಿದ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ನಟ ದರ್ಶನ್ ವಿರುದ್ಧ ಪ್ರತಿಭಟನೆಗೆ ಹೋಗಲೇಬೇಕಿದೆ. ಆದರೆ ನಾನು ಏಕೆ ಈ ಪ್ರತಿಭಟನೆಯಲ್ಲಿ ಭಾಗವಹಿಸಬಾರದು? ಎಂದು ಆ ವ್ಯಕ್ತಿಯನ್ನು ಫೋನ್ ನಲ್ಲಿ ಪ್ರಶ್ನಿಸಿದೆ. ಆಗ ಆ ವ್ಯಕ್ತಿ ತಕ್ಷಣ ಫೋನ್ ಕಟ್ ಮಾಡಿದ. ಈ ಬಗ್ಗೆ ಸದ್ಯ ಚಿತ್ರದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಿಪ್ಪಾರೆಡ್ಡಿ ಅವರಿಗೆ ಬೆದರಿಕೆ ಹಾಕಿದ ಅನಾಮಧೇಯ ವ್ಯಕ್ತಿಗಾಗಿ ಶೋಧ ನಡೆಸುತ್ತಿದ್ದಾರೆ.
ಮಾಜಿ ಶಾಸಕ ತಿಪ್ಪಾರೆಡ್ಡಿಗೆ ದರ್ಶನ್ ಅಭಿಮಾನಿಯಿಂದ ಬೆದರಿಕೆ!

