ಬೆಂಗಳೂರು: ಡಾ, ರಾಜ್‌ಕುಮಾರ್ ಅಭಿಮಾನಿಯಾದ ಯೋಗಿ ತಮಗೆ ನಿರಂತರವಾಗಿ ಜೀವ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.
ರಂಗಾರೆಡ್ಡಿ, ವೀರೇಶ ದಚ್ಚು, ದರ್ಶನ್ ಫ್ಯಾನ್ ಪೇಜ್, ಎಂಬ ಹೆಸರು ಹೊಂದಿರುವ ಫೇಸ್ಬುಕ್ ಖಾತೆಗಳಿಂದ ನನಗೆ ಜೀವ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದು ದೂರು ದಾಖಲಿಸಿದ್ದಾರೆ.
ಫೇಸ್ಬುಕ್ ನಕಲಿ ಖಾತೆಗಳನ್ನು ತೆರೆದು ನಾವು “ಡಿ ಬಾಸ್ ಅಭಿಮಾನಿಗಳು ನಮ್ ಕೈಗೆ ಸಿಕ್ಕರೆ ನಿನ್ ಕಥೆ ಮುಗಿಸ್ತಿವಿ ಆಂತ ಪೋಸ್ಟ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಇಂತಹ ಸಂದೇಶಗಳು ಪದೆ ಪದೆ ಬರುತ್ತಿವೆ ಎಂದು ಪೋಲಿಸ್‌ರ ಮುಂದೆ ತಿಳಿಸಿದ್ದಾರೆ.
ರಂಗಾರೆಡ್ಡಿ, ವೀರೇಶ ದಚ್ಚು, ದರ್ಶನ್ ಫ್ಯಾನ್ ಪೇಜ್‌ಗಳ ವಿರುದ್ದ ದೂರನ್ನು ದಾಖಲಿಸಿಕೊಂಡು ಪೊಲೀಸರು ಆರೋಪಿಗಳ ಹುಡುಕಾಟ ಆರಂಭಿಸಿದ್ದಾರೆ.