ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎ1 ಆರೋಪಿ ಪವಿತ್ರಾ ಗೌಡ ಸದ್ಯ ಊಟ, ನಿದ್ರೆ ಇಲ್ಲದೆ ರಾತ್ರಿ ಕಳೆದು ಯಾವಾಗಲೂ ಖಿನ್ನತೆಯಿಂದ ಚಿಂತೆ ಮಾಡುತ್ತಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ D ಬ್ಯಾರಕ್ ಸೆಲ್ ನಲ್ಲಿರುವ ಪವಿತ್ರಾ ಗೌಡ ಅವರು ನನ್ನಿಂದಲೇ ದರ್ಶನ್ ಗೆ ಈ ಗತಿ ಬಂದಿದೆ ಎಂದು ಯಾವಾಗಲೂ ಅಳು ಮುಖ ಮಾಡಿಕೊಂಡು ದುಃಖದಲ್ಲಿದ್ದಾರೆ. ಪವಿತ್ರಾ ಗೌಡ ಇರುವ D ಬ್ಯಾರಕ್ ಸೆಲ್ ಪಕ್ಕದಲ್ಲೇ ಮತ್ತೊಂದು ಬ್ಯಾರಕ್ ನಲ್ಲಿರುವ ದರ್ಶನ್ ಸಹ ಚಾಪೆಯಲ್ಲಿ ಮಲಗಿ ದಿನ ಕಳೆಯಬೇಕಾಗಿದೆ.
ಪವಿತ್ರಾ ಗೌಡ ಸಿನಿ ಜರ್ನಿ ಕಳಪೆಯಾಗಿದ್ದರೂ, ತೆರೆಯಾಚೆಗಿನ ವ್ಯವಹಾರಗಳು ಅವರನ್ನು ಕೈಹಿಡಿದಿದ್ದವು. ಅವರು ಆರಂಭಿಸಿದ ಡ್ರೆಸ್ಸಿಂಗ್ ಬ್ಯಸಿನೆಸ್ ಅವರನ್ನು ಆರ್ಥಿಕವಾಗಿ ಸದೃಢರಾಗಿಸಿತ್ತು. ಈ ನಡುವೆ ದರ್ಶನ್ ಜತೆಗಿನ ಸ್ನೇಹ ಅವರನ್ನು ಮುಂಚೂಣಿಗೆ ತಂದಿತ್ತು.
ಈ ನಡುವೆ ದರ್ಶನ್ ಪತ್ನಿ ಜತೆಗೆ ಜಿದ್ದಿಗೆ ಬಿದ್ದು ಅನೇಕ ಅವಾಂತರ ಮಾಡಿಕೊಂಡಿರುವ ಪವಿತ್ರಾ ದರ್ಶನ್ ಕೆರಿಯರ್ ಗೆ ಪೆಟ್ಟು ನೀಡಿದ್ದಾರೆ. ಈ ನಡುವೆ ತಮಗೆ ಮೆಸೇಜ್ ಮಾಡಿದ ವ್ಯಕ್ತಿಯನ್ನು ಕರೆತಂದು ಕೊಲೆ ಮಾಡಿದ ಆರೋಪದಲ್ಲಿ ದರ್ಶನ್ ಬಂಧನವಾಗಿ ಜೈಲು ಸೇರಿದ್ದಾರೆ. ಇದು ಸಹಜವಾಗಿಯೇ ಪವಿತ್ರಾಗೆ ಪಾಪಪ್ರಜ್ಞೆ ಕಾಡುವಂತೆ ಮಾಡಿದೆ.
ದರ್ಶನ್ ಸಿನಿಮಾ ಗ್ರಾಪ್ ಕಾಟೇರ ನಂತರ ಮತ್ತಷ್ಟು ಉತ್ತುಂಗಕ್ಕೇರಿತ್ತು. ಸಾಲು ಸಾಲು ಚಿತ್ರಗಳಿಗೆ ದರ್ಶನ್ ಸಹಿ ಮಾಡಿದ್ದರು. ಅವರ ಚಿತ್ರಗಳು ನೂರು ಕೋಟಿ ಮೀರಿದ ಬಜೆಟ್ ಚಿತ್ರಗಳಾಗುತ್ತಿದ್ದವು. ಅನೇಕ ಚಿತ್ರಗಳಿಗೆ ಈಗಾಗಲೇ ದರ್ಶನ್ ಅಡ್ವಾನ್ಸ್ ಕೂಡ ಪಡೆದಿದ್ದರು. ಈ ಸಂದರ್ಭದಲ್ಲಿ ನಡೆದ ಈ ಘಟನೆ ದರ್ಶನ್ ಸಿನಿಮಾ ಕೆರಿಯರ್ ಹಾಳು ಮಾಡಿರುವುದು ಸಹಜವಾಗಿಯೇ ಪವಿತ್ರಾ ಗೌಡ ಅವರಿಗೆ ನೋವುಂಟು ಮಾಡಿದೆಯಂತೆ.
