ಅಪರಾಧ ಸಿನಿಮಾ ಸುದ್ದಿ

ದರ್ಶನ್ ಜೈಲು, ಭಾರತಕ್ಕೆ ವಿಶ್ವಕಪ್ : ಸೋಷಿಯಲ್ ಮೀಡಿಯಾದಲ್ಲಿ ವೈರಲ್

Share It


ಬೆಂಗಳೂರು: ಅಭಿಮಾನಿಗಳು ಎಲ್ಲವನ್ನೂ ಆನಂಧಿಸುತ್ತಾರೆ. ಅದು ಕೆಲವು ಬಾರಿ ಅತಿರೇಕದ ಪರಮಾವಧಿ ತಲುಪುತ್ತದೆ. ದರ್ಶನ್ ವಿಚಾರದಲ್ಲಿ ಇದು ಮತ್ತೊಂದು ಮೈಲುಗಲ್ಲು ಮುಟ್ಟಿದೆ.

ದರ್ಶನ್, 2011ರಲ್ಲಿ ತಮ್ಮ ಪತ್ನಿ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ನಡೆಸಿ ಜೈಲು ಸೇರಿದ್ದರು. ಆಗಲೂ ಅಭಿಮಾನಿಗಳು ಹೀಗೆ, ಹುಚ್ಚು ಅಭಿಮಾನ ಮೆರೆದಿದ್ದರು. ಅದೇ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ‘ಸಾರಥಿ’ ಬ್ಲಾಕ್ ಬಾಸ್ಟರ್ ಆಗಿತ್ತು. ಅದು ದರ್ಶನ್ ವೃತ್ತಿ ಜೀವನವನ್ನು ಬೇರೆಡೆಗೆ ತೆಗೆದುಕೊಂಡು ಹೋಗಿತ್ತು.

ಅದರಲ್ಲೂ ಭಾರತ 2011 ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಶ್ರೀಲಂಕಾ ವಿರುದ್ಧ ಮುಂಬಯಿಯಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಭಾರತದ ವಿರೋಚಿತ ಗೆಲುವು ಪಡೆದು, ಎರಡನೇ ಬಾರಿಗೆ ಏಕದಿನ ವಿಶ್ವಕಪ್ ಮುಡುಗೇರಿಸಿ ಕೊಂಡಿತ್ತು.

ಇದೀಗ ದರ್ಶನ್ ರೇಣುಕಾ ಸ್ವಾಮಿ ಕೊಲೆ ಕೇಸಲ್ಲಿ ಜೈಲು ಸೇರಿದ್ದು ಫೈನಲ್ ಪಂದ್ಯದ ವೇಳೆಯೇ ಸಾಮಾಜಿಕ ಜಾಲತಾಣದಲ್ಲಿ ಇಂತಹದ್ದೊಂದು ಪೊಸ್ಟರ್ ಹರಿದಾಡುತ್ತಿತ್ತು. ಡಿ ಬಾಸ್ ಜೈಲಿಗೆ ಹೋಗಿದ್ದಾಗ, ಭಾರತ ಕಪ್ ಗೆದ್ದಿದೆ. ಈಗಲೂ ಭಾರತ ವಿಶ್ವಕಪ್ ಗೆಲ್ಲಲಿದೆ ಎಂದು ಕೆಲವರು ಕಮೆಂಟ್ ಮಾಡಿದ್ದರು.

ಇದೀಗ ಕಾಕತಾಳೀಯ ಎಂಬಂತೆ, ಭಾರತ ರೋಹಿತ್ ಶರ್ಮಾ ನೇತೃತ್ವದಲ್ಲಿ ಎರಡನೇ ಬಾರಿಗೆ ಟಿ-20 ವಿಶ್ವಕಪ್ ಗೆದ್ದು ಬೀಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಇದೀಗ ಡಿ ಬಾಸ್ ಜೈಲಿಗೆ ಹೋಗಿದ್ದಕ್ಕೆ ಭಾರತ ವಿಶ್ವಕಪ್ ಗೆದ್ದಿದೆ ಎಂಬರ್ಥದ ಪೋಸ್ಟರ್ ಗಳು ಹರಿದಾಡುತ್ತಿವೆ.

ಜತೆಗೆ ಬಿಎಸ್ ವೈ 2011 ರಲ್ಲಿ ಜೈಲಿಗೆ ಹೋಗಿದ್ದರು, ಈಗಲೂ ಇನ್ನೇನು ಜೈಲು ಸೇರುವಂತಹ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ, ಬಿಎಸ್ ವೈ ಮತ್ತು ದರ್ಶನ್ ಅವರ ಜೈಲುವಾಸ ಮತ್ತು ಭಾರತಕ್ಕೆ ವಿಶ್ವಕಪ್ ಎರಡನ್ನೂ ಹೋಲಿಸಿ, ಅಭಿಮಾನಿಗಳು ಹವಾ ಸೃಷ್ಟಿಸುತ್ತಿದ್ದಾರೆ. ಈ ಅಭಿಮಾನಕ್ಕೆ ಏನೇಳಬೇಕೋ?


Share It

You cannot copy content of this page