ಬೆಂಗಳೂರು: ಕೊಲೆ ಆರೋಪದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ನಂತರ ನ್ಯಾಯಾಲಯಕ್ಕೆ ಹಾಜರು ಮಾಡಲಾಗುತ್ತದೆ.
ಪವಿತ್ರಾ ಗೌಡ ಅವರಿಗೆ ಕೆಟ್ಟದಾಗಿ ಕಮೆಂಟ್ ಮಾಡಿದ ಆರೋಪದಲ್ಲಿ ರೇಣುಕಾ ಸ್ವಾಮಿ ಎಂಬ ಚಿತ್ರದುರ್ಗದ ಯುವಕನ ಕೊಲೆಯಾಗಿದೆ. ಈ ಕೊಲೆ ಆರೋಪದಲ್ಲಿ ಹತ್ತು ಜನರನ್ನು ಬಂಧಿಸಲಾಗಿದ್ದು, ದರ್ಶನ್ ಅವರನ್ನು ಬೆಳಗ್ಗೆಯಿಂದ ಪೊಲೀಸರು ವಿಚಾರಣೆ ನಡೆಸಿದ್ದರು.
ವಿಚಾರಣೆ ವೇಳೆ ದರ್ಶನ್, ತಾವು ಆತನಿಗೆ ಬೆದರಿಸಲು ಅಷ್ಟೇ ಹೇಳಿದ್ದೆ, ನಾನು ಕೊಲೆ ಮಾಡಿಲ್ಲ ಎಂದಿದ್ದಾರೆ. ಜತೆಗೆ, ದರ್ಶನ್ ಆತನನ್ನು ಕೊಲೆ ಮಾಡಿದ ಜಾಗಕ್ಕೆ ಖುದ್ದು ಭೇಟಿ ನೀಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಸಾಭೀತಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿ, ನಂತರ ಅವರನ್ನು ವಶಕ್ಕೆ ಪಡೆಯುವ ಆಲೋಚನೆ ಪೊಲೀಸರದ್ದು.
ಪವಿತ್ರಾ ಗೌಡ ಅವರಿಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾನೆ ಎಂದು ಆರೋಪಿಸಿ, ಆತನನ್ನು ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ದರ್ಶನ್ ಆಜ್ಞೆಯ ಮೇರೆಗೆ ಕರೆತಂದಿದ್ದ. ಇಲ್ಲಿ ಕರೆತಂದು ರಾಜರಾಜೇಶ್ವರಿ ನಗರದ ಶೆಡ್ ವೊಂದರಲ್ಲಿ ಕೂಡಿಹಾಕಿ, ಅವರಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿ, ನಂತರ ರಾಜಕಾಲುವೆಯಲ್ಲಿ ಶವ ಎಸೆಯಲಾಗಿತ್ತು.
updating…

