ದರ್ಶನ್-ಸುದೀಪ್ ಸ್ಟಾರ್ ವಾರ್ ಶುರು : ಕಿಡಿ ಹೊತ್ತಿಸಿದ ಸುದೀಪ್ ಹೇಳಿಕೆ
ಬೆಂಗಳೂರು: ನಟ ಸುದೀಪ್ ನೀಡಿದ ಹೇಳಿಕೆಯೊಂದು ಇದೀಗ ಚಲನಚಿತ್ರ ವಲಯದಲ್ಲಿ ಕಿಡಿ ಹೊತ್ತಿಸಿದ್ದು, ಸುದೀಪ್-ದರ್ಶನ್ ಅಭಿಮಾನಿಗಳ ನಡುವಿನ ಜಂಗೀಕುಸ್ತಿಗೆ ಮುನ್ನುಡಿ ಬರೆದಿದೆ.
ಮಾರ್ಕ್ ಬಿಡುಗಡೆ ಸಂದರ್ಭದ ಹೇಳಿಕೆಯಿಂದ ದರ್ಶನ್ ಅಭಿಮಾನಿಗಳು ಕೆರಳಿದ್ದಾರೆ. ಸ್ವತಃ ದರ್ಶನ್ ಪತ್ನಿ ವಿಜಯಲಕ್ಷಿö್ಮ, ಕೆಲವರು ದರ್ಶನ್ ಜೈಲಿನಲ್ಲಿದ್ದಾಗ ಮಾತ್ರ ಮಾತನ್ನಾಡುತ್ತಾರೆ. ಅವರು ಹೊರಗಿದ್ದಾಗ ಬೆಂಗಳೂರಿನಲ್ಲಿ ಇದ್ದಾರೋ ಇಲ್ಲವೋ ಎಂಬAತೆ ಇರುತ್ತಾರೆ’ ಎನ್ನುವ ಮೂಲಕ ಕಿತ್ತಾಟಕ್ಕೆ ಮುನ್ನುಡಿ ಬರೆದಿದ್ದಾರೆ.
ವಿಜಯಲಕ್ಷಿö್ಮ ಅವರ ಈ ಮಾತಿನಿಂದಲೇ ಮತ್ತಷ್ಟು ಕೆರಳಿರುವ ದರ್ಶನ್ ಅಭಿಮಾನಿಗಳು ಸುದೀಪ್ ವಿರುದ್ಧ ಜಾಲತಾಣದಲ್ಲಿ ಬಾಯಿಗೆ ಬಂದAತೆ ಮಾತನ್ನಾಡುತ್ತಿದ್ದಾರೆ. ಡೆವಿಲ್ ಸಿನಿಮಾ ಈಗಾಗಲೇ ಬಿಡುಗಡೆಯಾಗಿದ್ದು, ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ಇಬ್ಬರು ಸ್ಟಾರ್ ನಟರ ಫ್ಯಾನ್ಸ್ ವಾರ್ ಶುರುವಾಗಿದೆ.


