ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ದರ್ಶನ್ ಜತೆಗೆ ಆತನ ಕುಟುಂಬಕ್ಕೂ ಕಂಕಟ ಎದುರಾಗಿದ್ದು, ಆತನ ಪತ್ನಿ ಇಂದು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ.
ಪ್ರಕರಣಕ್ಕೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೂ ಯಾವುದೇ ಸಂಬಂಧವಿಲ್ಲ. ಆದರೂ, ವಿಜಯಲಕ್ಷ್ಮಿ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಇದಕ್ಕೆ ಕಾರಣ ದರ್ಶನ್ ಅವರು ರೇಣುಕಾ ಸ್ವಾಮಿಗೆ ಥಳಿಸಿದ ವೇಳೆಯಲ್ಲಿ ಧರಿಸಿದ್ದ ಶೂ ಗಳನ್ನು ವಿಜಯಲಕ್ಷ್ಮಿ ಮನೆಯಲ್ಲಿ ಬಿಟ್ಟಿದ್ದರು ಎನ್ನಲಾಗಿದೆ. ಹೀಗಾಗಿ, ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದು, ಅವರು ವಿಚಾರಣೆ ಎದುರಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ದರ್ಶನ್ ನಿವಾಸದಲ್ಲಿ ರೇಣುಕಾ ಸ್ವಾಮಿಯನ್ನು ಥಳಿಸಿದ್ದ ನಂತರ ಬಳಸಿದ ವಸ್ತುಗಳ ಮಹಜರು ನಡೆಸಿದ್ದರು. ಈ ವೇಳೆ ಅವರ ಶೂ ಸಿಕ್ಕಿರಲಿಲ್ಲ. ಇದೆಲ್ಲವನ್ನೂ ವಿಜಯಲಕ್ಷ್ಮಿ ಅವರ ಅಪಾರ್ಟ್ಮೆಂಟ್ ಗೆ ಕಳುಹಿಸಿರುವುದಾಗಿ ದರ್ಶನ್ ಅವರ ಕಾಸ್ಟ್ಯೂಮ್ ಮ್ಯಾನೇಜರ್ ತಿಳಿಸಿದ್ದರು.
ಹೀಗಾಗಿ, ಪೊಲೀಸರು ಅಲ್ಲಿಂದಲೇ ಕೆಲ ವಸ್ತುಗಳ ವಶಪಡಿಸಿಕೊಂಡಿದ್ದರು. ಹೀಗಾಗಿ, ವಿಚಾರಣೆಗೆ ಹಾಜರಾಗುವಂತೆ ವಿಜಯಲಕ್ಷ್ಮಿ ಅವರಿಗೆ ಪೊಲೀಸರು ನೊಟೀಸ್ ನೀಡಿದ್ದರು. ಹೀಗಾಗಿ, ವಿಜಯಲಕ್ಷ್ಮಿ ವಿಚಾರಣೆ ಎದುರಿಸಿದ್ದಾರೆ.

