ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಇಂದು ಊಟ ತಂದಿದ್ದಾರೆ. ಇಂದು ವಿಜಯಲಕ್ಷ್ಮಿ ಪುತ್ರ ವಿನೀಶ್ ಜೊತೆಗೆ ಕಿಯಾ ಕಾರಿನಲ್ಲಿ ಪರಪ್ಪನ ಅಗ್ರಹಾರಕ್ಕೆ ತೆರಳಿ ಪತಿಗೆ ಊಟ ಕೊಂಡೊಯ್ದಿದ್ದಾರೆ. ಆದರೆ ಮಾಧ್ಯಮದವರನ್ನ ಕಂಡು ವಿಜಯಲಕ್ಷ್ಮಿ ವಾಪಸ್ ಹೊರಟಿದ್ದಾರೆ.
ದರ್ಶನ್ ಬಂಧನವಾಗಿ 9 ದಿನಗಳ ಬಳಿಕ ವಿಜಯಲಕ್ಷ್ಮಿ ಜೂನ್ 19 ರಂದು ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಗೆ ಆಗಮಿಸಿ ಪತಿಯನ್ನು ಮೊದಲ ಬಾರಿ ಭೇಟಿಯಾಗಿದ್ದರು. ಬಳಿಕ ನ್ಯಾಯಾಂಗ ಬಂಧನವಾಗಿತ್ತು
ಪತಿ ದರ್ಶನ್ ಕುರಿತಾಗಿ ಆರೋಪಗಳು ಕೇಳಿಬರುತ್ತಿದ್ದಂತೆ ವಿಜಯಲಕ್ಷ್ಮಿ ಮನನೊಂದು ದರ್ಶನ್ ಅವರನ್ನು ಅನ್ ಫಾಲವ್ ಮಾಡಿ ಬಳಿಕ ಸೋಶಿಯಲ್ ಮೀಡಿಯಾಗೆ ಗುಡ್‌ಬೈ ಹೇಳಿದ್ದರು. ಬಳಿಕ ಮುನಿಸು ಮರೆತು ಮತ್ತೆ ಇನ್ಸ್ಟಾಗ್ರಾಂ ಖಾತೆಯನ್ನು ಸಕ್ರಿಯಗೊಳಿಸಿದ್ದಾರೆ.
ಈ ಹಿಂದೆ 2011 ರಲ್ಲಿ ದರ್ಶನ್ ವಿಜಯಲಕ್ಷ್ಮಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಕೆಲ ದಿನಗಳ ಕಾಲ ಜೈಲು ಸೇರಿದ್ದರು.ಅಲ್ಲದೆ ಅವರು ತೀವ್ರವಾಗಿ ಗಾಯಗೊಂಡಿದ್ದರೂ ವಿಜಯಲಕ್ಷ್ಮಿ ಬಳಿಕ ಪತಿಯ ವಿರುದ್ಧದ ದೂರನ್ನು ಹಿಂಪಡೆದು, ಸಂಧಾನ ಮಾಡಿಕೊಂಡು ಬಳಿಕ ಸಂಸಾರ ಮುಂದುವರಿಸಿಕೊಂಡು ಹೋಗಿದ್ದರು.

