ಬೆಂಗಳೂರು: ಇತ್ತೀಚೆಗಷ್ಟೇ ಇನ್ ಸ್ಟಾಗ್ರಾಂಗೆ ಕಾಲಿಟ್ಟಿದ್ದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಇದೀಗ ಪತಿ ದರ್ಶನ್ ತೂಗುದೀಪ್ ಅವರನ್ನು ಅನ್ ಫಾಲೋ ಮಾಡಿದ್ದಾರೆ. ಅಲ್ಲದೇ ಇಬ್ಬರೂ ಜೊತೆಗಿರುವ ಡಿಪಿ ಫೋಟೊವನ್ನು ಡಿಲೀಟ್ ಮಾಡಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟ ದರ್ಶನ್ ಮತ್ತು ನಟಿ ಪವಿತ್ರ ಗೌಡ ಮದುವೆ ಆಗಿದ್ದಾರೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದ್ದರೆ, ಮತ್ತೊಂದೆಡೆ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಳಗಾಗಿದ್ದಾರೆ.
ನಾನು ನಟ ದರ್ಶನ್ ತೂಗುದೀಪ್ ಅವರನ್ನು ಮದುವೆ ಆಗಿರುವುದಾಗಿ ಪವಿತ್ರ ಗೌಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುತ್ತಿದ್ದಾಗ ವಿಜಯಲಕ್ಷ್ಮೀ ನಿಂದಿಸಿ ಪೋಸ್ಟ್ ಮಾಡುತ್ತಿದ್ದರು. ಇಬ್ಬರ ನಡುವೆ ಪದೇಪದೇ ಜಗಳ ಆಗುತ್ತಿತ್ತು. ಆದರೆ ಇಬ್ಬರೂ ಮದುವೆ ಆಗಿರುವುದು ದೃಢಪಟ್ಟಿರಲಿಲ್ಲ.
ಆದಾಗ್ಯೂ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅವರನ್ನು ಒಂದು ವರ್ಷದ ಹಿಂದೆ ದರ್ಶನ್ ತೂಗುದೀಪ್ ಮದುವೆ ಆಗಿರುವುದು ದೃಢಪಟ್ಟಿದೆ!
ಅಲ್ಲದೇ ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದು ಹಾಗೂ 2ನೇ ಮದುವೆ ಆಗಿದ್ದಕ್ಕೆ ಟೀಕೆ ಮಾಡಿದ್ದಕ್ಕೆ ಪವಿತ್ರಾ ಗೌಡ ಸಲಹೆ ಮೇರೆಗೆ ದರ್ಶನ್ ರೇಣುಕಾಸ್ವಾಮಿ ಮೇಲೆ
ಹಲ್ಲೆ ಮಾಡಿಸಿದ್ದರಿಂದ ಆತ ಕೊಲೆಯಾಗಿ ದುರಂತಕ್ಕೆ ದಾರಿ ಮಾಡಿಕೊಟ್ಟಿದೆ.

