ನವದೆಹಲಿ: ನಟ ದರ್ಶನ್ ವಿರುದ್ಧದ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ನೀಡಿರುವ ಜಾಮೀನು ಭವಿಷ್ಯ ಗುರುವಾಗ ನಿರ್ಧಾರವಾಗಲಿದೆ.
ದರ್ಶನ್‌ಗೆ ಹೈಕೊರ್ಟ್ ಜಾಮೀನಿ ನೀಡಿರುವುದನ್ನು ಪ್ರಶ್ನಿಸಿ ಎಸ್‌ಐಟಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಸೋಮವಾರದಿಂದ ನಡೆಯುತ್ತಿದೆ.
ಇಂದು ಅರ್ಜಿಯ ವಿಚಾರಣೆ ಆರಂಭವಾಗುತ್ತಿದ್ದಂತೆ ವಾದ ಆರಂಭಿಸಬೇಕಿದ್ದ ದರ್ಶನ ಪರ ವಕೀಲರು ಒಂದು ದಿನದ ಕಾಲಾವಕಾಶ ಕೋರಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.
ಈ ಹಿನ್ನೆಲೆಯಲ್ಲಿ ಗುರುವಾರ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ. ಪ್ರಸ್ತುತ ಜಾಮೀನಿನ ಮೇಲಿರುವ ನಟ ದರ್ಶನ್ ಡೆವಿಲ್ ಶೂಟಿಂಗ್‌ಗಾಗಿ ಬ್ಯಾಂಕಾಕ್‌ಗೆ ತೆರಳಿದ್ದಾರೆ.