ದಾಸರಹಳ್ಳಿ ಆಮ್ ಆದ್ಮಿ ಪಕ್ಷದ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಪೀಣ್ಯ ದಾಸರಹಳ್ಳಿ: ಸಮೀಪದ ಸಿಡೇದಹಳ್ಳಿಯಲ್ಲಿ ಸೌಂದರ್ಯ ಪಿ. ಮಂಜಪ್ಪ ಮತ್ತು ಎಂ.ಕೀರ್ತನ್ ಕುಮಾರ್ ಅವರು ಆಮ್ ಅದ್ಮಿ ಪಕ್ಷ ತೊರೆದು ತಮ್ಮ ಮುಖಂಡರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಇವರನ್ನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪಿ. ರಾಜೀವ್ ಗೌಡ ಅವರು ಕಾಂಗ್ರೆಸ್ ಶಾಲು ಹಾಕಿ ಬರಮಾಡಿಕೊಂಡರು.
ನಂತರ ಕಾಂಗ್ರೆಸ್ ಮುಖಂಡರಾದ ಅನುಭವ ಜಗದೀಶ್ ಅವರ ಮನೆ, ಪೀಣ್ಯ 2ನೇ ಹಂತದ ರಾಮಯ್ಯ ಬಡಾವಣೆ, ಪೀಣ್ಯ ಕೈಗಾರಿಕಾ ಪ್ರದೇಶದ ಎಂಇಐ ಬಡಾವಣೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಆರ್. ಮಂಜುನಾಥ್, ಪಾಲಿಕೆ ಮಾಜಿ ಸದಸ್ಯ ಕೆ. ನಾಗಭೂಷಣ್, ಮುಖಂಡರಾದ ಕೆ.ಸಿ. ಅಶೋಕ್, ಮೋಹನ್, ಅನುಭವ ಜಗದೀಶ್, ಎಂ. ಸಿದ್ದರಾಜು, ಅಬ್ದುಲ್ ವಾಜೀದ್, ಜಯಂತಿ ಭಗವಾನ್, ಪುಟ್ಟರಾಜು ಮುಂತಾದವರಿದ್ದರು.