ಅಪರಾಧ ಸುದ್ದಿ

ಮಾವನಿಂದಲೇ ಸೊಸೆಗೆ ಲೈಂಗಿಕ ಕಿರುಕುಳ: ದೂರು ದಾಖಲು

Share It

ಬೆಂಗಳೂರು: ಸ್ವತಃ ಮಾವನೇ ತನ್ನ ಸೊಸೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇತ್ತೀಚೆಗೆ ಮದುವೆಯಾಗಿ ಬಂದಿದ್ದ ಸೊಸೆಗೆ ಮಾವ ದಿನವೂ ಲೈಂಗಿಕವಾಗಿ ಪೀಡಿಸುತ್ತಿದ್ದ, ನೀವು ಚೆನ್ನಾಗಿದ್ದೀಯಾ ನನ್ನೊಂದಿಗೆ ಸಹಕರಿಸು ಎಂದು ಒತ್ತಾಯಿಸುತ್ತಿದ್ದ ಎಂದು ಸೊಸೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಥಣಿಸಂದ್ರದ ಪ್ರತಿಷ್ಠಿತ ಶಾಲೆಯೊಂದರ ಫ್ರಿನ್ಸಿಪಾಲ್ ಆಗಿರುವ ಮಹಿಳೆ ಶಾಲೆಯ ಸಂಸ್ಥಾಪಕನೂ ಆದ ತನ್ನ ಮಾವನ ವಿರುದ್ಧವೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಜತೆಗೆ ಶಾಲೆಯ ಕ್ಯಾಬಿನ್‌ಗೆ ಕರೆದು ಅಲ್ಲಿಯೂ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ. ಈ ವಿಷಯವನ್ನು ಮಹಿಳೆ ತನ್ನ ಗಂಡನಿಗೆ ತಿಳಿಸಿದ್ದು, ಆತನ ಮಾತಿಗೂ ಸೊಪ್ಪು ಹಾಕದೆ ದುರ್ವರ್ತನೆ ತೋರಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಾವನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರುವ ಆರ್.ಟಿ ನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.


Share It

You cannot copy content of this page